ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಓಡಾಡುತ್ತಿದ್ದ ಅಪ್ಪನ ಮೇಲೆ ಗುಂಡಿನ ದಾಳಿ…

61
firstsuddi

ಲಖನೌ: ಪುಟ್ಟ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಓಡಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬನ ಮೇಲೆ ದುಷ್ಕರ್ಮಿಗಳು ಭೀಕರ ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಪ್ರದೇಶದ ಶಹಜಹನಪುರದಲ್ಲಿ ನಡೆದಿದೆ. ಈ ಭೀಕರ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

30 ವರ್ಷದ ವ್ಯಾಪಾರಿ ಶೋಯಿಬ್ ತನ್ನ ಪುಟ್ಟ ಮಗಳನ್ನು ಹೆಗಲಮೇಲೆ ಕೂರಿಸಿಕೊಂಡು ಕಿರಿದಾದ ರಸ್ತೆಯಲ್ಲಿ ಓಡಾಡುತ್ತಿದ್ದ. ಈ ವೇಳೆ ಎದುರಿನಿಂದ ಬಂದ ವ್ಯಕ್ತಿಯೊಬ್ಬ ಬಂದೂಕನ್ನು ಹೊರತೆಗೆದು ಅವರ ಸಮೀಪದಿಂದ ಗುಂಡು ಹಾರಿಸಿದ್ದಾನೆ.

ವ್ಯಕ್ತಿ, ಮಗಳ ಜತೆ ನೆಲದ ಮೇಲೆ ಕುಸಿದು ಬೀಳುತ್ತಾನೆ, ಆಗ ಆರೋಪಿಗಳು ಬೈಕ್ ಹತ್ತಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಹೆಗಲ ಮೇಲಿದ್ದ ಮಗಳಿಗೆ ಗುಂಡಿನ ಗಾಯವಾಗಿಲ್ಲ. ಆದರೆ ಬಿದ್ಧ ರಭಸಕ್ಕೆ ರಸ್ತೆಗೆ ತಲೆ ತಾಗಿ ಗಾಯಗಳಾಗಿದೆ. ಕೆಲ ಹೊತ್ತು ಶೋಯೆಬ್ ನೆರವಾಗಿ ಯಾರು ಬಂದಿಲ್ಲ. ಬಳಿಕ ಪೊಲೀಸರು ಆಗಮಿಸಿ ಶೋಯಿಬ್ ಹಾಗೂ ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಳೇ ದ್ವೇಷದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.