ಮಚ್ಚಿನಿಂದ ಕೊಚ್ಚಿ ಯುವತಿಯ ಬರ್ಬರ ಹತ್ಯೆ…

84
firstsuddi

ಕೊಡಗು : ಮಚ್ಚಿನಿಂದ ಕೊಚ್ಚಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ವಿರಾಜಪೇಟೆ ಸಮೀಪದ ನಂಗಾಲ ಗ್ರಾಮದಲ್ಲಿ ನಡೆದಿದೆ.

ಆರತಿ(24) ಮೃತ ಯುವತಿ. ಅದೇ ಊರಿನ ತಿಮ್ಮಯ್ಯ ಎಂಬಾತನೇ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೂರು ದಿನಗಳಿಂದ ಆರತಿಗೆ ತಮ್ಮಯ್ಯ ಟಾರ್ಚರ್ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ನಿನ್ನೆ ರಾತ್ರಿ ಆತನೇ ಹತ್ಯೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಇನ್ನು ಕೆರೆಯ ಬಳಿ ಪತ್ತೆಯಾಗಿರುವ ತಿಮ್ಮಯ್ಯನ ಚಪ್ಪಲಿ, ಮದ್ಯದ ಬಾಟಲಿ ವಿಷದ ಡಬ್ಬಿಯನ್ನ ನೋಡಿದರೆ ಆರೋಪಿ ತಿಮ್ಮಯ್ಯ ವಿಷ ಕುಡಿದು ಕೆರೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಡಿಕೇರಿ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದು, ಕೆರೆಯಲ್ಲಿ ತಿಮ್ಮಯ್ಯನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.