ಮದ್ಯಪಾನ ಬದಲು ಹಸುವಿನ ಹಾಲು ಕುಡಿಯಿರಿ : ಜನರಿಗೆ ಉಮಾ ಭಾರತಿ ಕರೆ…

63
firstsuddi

ಭೋಪಾಲ್ : ಮದ್ಯ ಸೇವನೆ ಬಿಡಿ ಅದರ ಬದಲಿಗೆ ಹಸುವಿನ ಹಾಲನ್ನು ಕುಡಿಯಲು ಪ್ರಾರಂಭಿಸಿ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಜನರಿಗೆ ಕರೆ ನೀಡಿದ್ದಾರೆ.

ಮಧ್ಯಪ್ರದೇಶದ ಓರ್ಚಾಗೆ ಭೇಟಿ ನೀಡಿದ ಅವರು, ಸ್ಥಳೀಯ ಮದ್ಯದ ಅಂಗಡಿಯೊಂದರ ಸುತ್ತಲೂ ಮೇಯುತ್ತಿದ್ದ ಬೀದಿ ಹಸುಗಳನ್ನು ಕಟ್ಟಿ ಅವುಗಳಿಗೆ ಆಹಾರ ನೀಡಿದ್ದಾರೆ. ಆ ಮದ್ಯದಂಗಡಿ ಮುಂದೆ ನಿಂತ ಉಮಾ ಭಾರತಿ,”ಶರಾಬ್ ನಹಿ, ದೂಧ್ ಪಿಯೋ’ (ಹಾಲು ಕುಡಿಯಿರಿ, ಮದ್ಯ ಅಲ್ಲ) ಎಂದಿದ್ದಾರೆ.

ಉಮಾಭಾರತಿ ಅವರು ಮಂಗಳವಾರ ಮಧ್ಯಪ್ರದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಮದ್ಯವೇ ಕಾರಣ ಎಂದಿದ್ದಾರೆ. ಅದೇ ವೇಳೆ ನಿಯಮಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ಮದ್ಯದ ಅಂಗಡಿಗಳನ್ನು ಗೋಶಾಲೆಗಳಾಗಿ ಪರಿವರ್ತಿಸಲು ಒತ್ತಾಯಿಸಿದ್ದಾರೆ.

ಓರ್ಚಾದಲ್ಲಿರುವ ಮದ್ಯದಂಗಡಿ ಹೊರಗೆ 11 ಹಸುಗಳನ್ನು ಕಟ್ಟಿಹಾಕಲು ವ್ಯವಸ್ಥೆ ಮಾಡಲು ತಿಳಿಸಿದ್ದೇನೆ. ಅಲ್ಲದೆ ಅವುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆಯನ್ನೂ ಮಾಡಲು ತಿಳಿಸಿದ್ದೇನೆ. ನನ್ನನ್ನು ತಡೆಯುವ ಧೈರ್ಯ ಯಾರಿಗಿದೆ ಎಂದು ನೋಡೋಣ ಎಂದು ಸವಾಲೆಸೆದಿದ್ದರು.