ಮಧ್ಯಪ್ರದೇಶ : ನಾವು ಸಾಮಾನ್ಯವಾಗಿ ದೇವಾನುದೇವತೆಗಳ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ತಂದೆ ತಾಯಿಗಳ ದೇವಾಲಯಗಳನ್ನು ನೋಡಿದ್ದೇವೆ. ಆದರೆ ಮಧ್ಯಪ್ರದೇಶದ ಉಜ್ಜೈನ್ನಲ್ಲಿ ಹುತಾತ್ಮ ಯೋಧರ ದೇವಾಯಲಯವನ್ನು ನಿರ್ಮಿಸಲಾಗಿದೆ. ಮಾಜಿ ಯೋಧ ಜಜ ದಾನ್ಸಿಂಗ್ ಚೌಧರಿ ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ದೇವಾಲಯವನ್ನು ಕಟ್ಟಿಸಿದ್ದಾರೆ. ಮಧ್ಯಪ್ರದೇಶದ ಉಜ್ಜೈನ್ನಲ್ಲಿ ಬಾಬಾ ಮಹಾಕಾಲ್ ದೇವಾಲಯ ಹೇಗೆ ಪ್ರಸಿದ್ಧಿಯೋ ಅದರಂತೆ ನೃಸಿಂಗ್ ಘಾಟ್ನಲ್ಲಿರುವ ಹುತಾತ್ಮ ಯೋಧರ ದೇವಾಲಯ ಅಷ್ಟೇ ಪ್ರಸಿದ್ದಿಯಾಗಿದೆ. ಜಜ ದಾನ್ಸಿಂಗ್ ಚೌಧರಿ ಅವರು 2009ರಲ್ಲಿ ಈ ದೇವಾಲಯವನ್ನು ಕಟ್ಟಿಸಿದ್ದು, ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ಈ ದೇವಾಲಯದಲ್ಲಿ ಕೊಡಗಿನ ವೀರಯೋಧ ಫೀಲ್ಡ್ ಮಾರ್ಷಲ್ ಜನರಲ್ ಕಾರಿಯಪ್ಪ ಅವರ ಮೂರ್ತಿ ಸೇರಿದಂತೆ 50ಕ್ಕೂ ಹೆಚ್ಚು ಹುತಾತ್ಮ ಯೋಧರ ಮೂರ್ತಿಗಳನ್ನು ನಿರ್ಮಿಸಿ ಅದರ ಕೆಳಗೆ ಯೋಧರ ಇತಿಹಾಸದ ಬಗ್ಗೆ ತಿಳಿಸಿದ್ದಾರೆ. ಈ ದೇವಾಲಯವನ್ನು ಕಟ್ಟಿಸಿದ ಮಾಜಿ ಯೋಧ ದಾನ್ಸಿಂಗ್ ಅವರು ನಿಧನರಾಗಿದ್ದು, ಸದ್ಯ ಈ ದೇವಾಯಲವನ್ನು ರಾಮ್ಸಿಂಗ್ ಎಂಬುವವರು ನೋಡಿಕೊಳ್ಳುತ್ತಿದ್ದಾರೆ.










