ಮನೆ ಕೆಲಸಕ್ಕೆ ಕರೆತಂದಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿ ಐರನ್ ಬಾಕ್ಸ್‌ನಿಂದ ಸುಟ್ಟು ವಿಕೃತಿ ಮೆರೆದ ಮೌಲ್ವಿ…

301
firstsuddi

ಬೆಂಗಳೂರು : ಯುವತಿಯನ್ನು ಮನೆ ಕೆಲಸಕ್ಕೆಂದು ಕರೆತಂದು ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರದ ಕೋರಮಂಗಲದಲ್ಲಿ ನಡೆದಿದೆ. ಇಸ್ಲಾಮ್ ಫರ್ವೆಜ್ ಎಂಬ ಮೌಲ್ವಿ ನಗರದಲ್ಲಿ ಮದರಸ ಹಾಗೂ ಟ್ಯುಟೋರಿಯಲ್ ನಡೆಸುತ್ತಿದ್ದನು. ಕಳೆದ ನಾಲ್ಕು ವರ್ಷದ ಹಿಂದೆ ಬಿಹಾರದಿಂದ ಯುವತಿಯನ್ನು ಕರೆತಂದು ಮದರಸದಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ಮೌಲ್ವಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದು, ಅಲ್ಲದೇ ಐರನ್ ಬಾಕ್ಸ್‌ನಿಂದ ಸುಟ್ಟು ವಿಕೃತಿ ಮೆರೆದಿದ್ದಾರೆ ಎಂದು ಸಂತ್ರಸ್ಥೆ ಯುವತಿ ಕೋರಮಂಗಲದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಸದ್ಯ ಯುವತಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೌಲ್ವಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.