ಮನ್ಸೂರ್ ಖಾನ್ ಎಲ್ಲಿ ಹೋಗಿದ್ದಾನೆ ಎಂದು ರಾಜ್ಯ ಸರ್ಕಾರ ಪತ್ತೆ ಮಾಡಬೇಕು: ಶೋಭ ಕರಂದ್ಲಾಜೆ…

406
firstsuddi

ಚಿಕ್ಕಮಗಳೂರು : ಐಎಂಎ ಜುವೆಲ್ಲರ್ಸ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಶೋಭ ಕರಂದ್ಲಾಜೆ ಅವರು ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ್ದು, ಐಎಂಎ ಒಂದು ಫ್ರಾಡ್ ಕಂಪನಿ ಎಂದು 2ವರ್ಷದ ಹಿಂದೆಯೇ ಜನ ಹೇಳಿದ್ದರು. ಮನ್ಸೂರ್ ಖಾನ್ ಜೊತೆ ಜಮೀರ್ ಅಹಮ್ಮದ್, ರೋಷನ್ ಬೇಗ್ ಹಾಗೂ ಅಧಿಕಾರಿಗಳಿಗೆ ಸಂಬಂಧವಿರುವುದು ಸಾಬೀತಾಗಿದೆ. ಸುದ್ದಿಗೋಷ್ಟಿ ನಡೆಸಿ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸವನ್ನು ಮಾಡುತ್ತಿದ್ದಾರೆ. ಜಮೀರ್ ಅಹಮದ್ ಅವರು ಮನ್ಸೂರ್ ಎಲ್ಲಿದ್ದೀಯಪ್ಪ ಬಾ ಎಂದು ಹೇಳುತ್ತಿರುವುದು ನಾಟಕ. ಮನ್ಸೂರ್ ಖಾನ್ ಎಲ್ಲಿ ಹೋಗಿದ್ದಾನೆ ಎಂದು ರಾಜ್ಯ ಸರ್ಕಾರ ಪತ್ತೆ ಮಾಡಬೇಕು. ರಾಜ್ಯ ಸರ್ಕಾರದ ಎಸ್.ಐ.ಟಿ ತನಿಖೆಯಿಂದ ಸತ್ಯ ಹೊರ ಬರುವುದಿಲ್ಲ. ಇದು ಅಂತರಾಜ್ಯ ಪ್ರಕರಣ ಆಗಿರುವುದರಿಂದ ಸಿಬಿಐ ಹಾಗೂ ಇಡಿಗೆ ನೀಡಬೇಕು. ಈ ಪ್ರಕರಣದಲ್ಲಿ ಶಾಮೀಲಾಗಿರುವವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹೂಡಿಕೆದಾರರಿಗೆ ನೀಡಬೇಕು ಎಂದು ಹೇಳಿದ್ದಾರೆ.