ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಪಲ್ಟಿ; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು…

67
firstsuddi

ಚಾಮರಾಜನಗರ : ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಟೆಂಪೋ ಟ್ರಾವಲರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ಹನೂರು ತಾಲ್ಲೂಕಿನ ಹುಣಸೇಮರ ದೊಡ್ಡಿ ಬಳಿ ನಡೆದಿದ್ದು, ಅದೃಷ್ಟ ವಶಾತ್ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಿಂದ 15 ಮಂದಿ ಮಹದೇಶ್ವರ ಬೆಟ್ಟಕ್ಕೆ ತೆರಳಲು ಟೆಂಪೋ ಟ್ರಾವಲರ್ ಮೂಲಕ ಕೊಳ್ಳೇಗಾಲ ಮಧುವನಹಳ್ಳಿ ಗೆ ಬಂದು ಅಲ್ಲಿಂದ ದಾರಿ ತಿಳಿಯದೆ ಲೊಕ್ಕನಹಳ್ಳಿ ಒಡೆಯರಪಾಳ್ಯ ರಸ್ತೆ ಕಡೆಗೆ ತೆರಳಿದ್ದಾರೆ. ಆದರೆ ಬೂದಿಪಡಗ ಬಳಿಯ ಹುಣಸೇಮರದೊಡ್ಡಿ ಬಳಿ ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ. ಅದೃಷ್ಟ ವಶಾತ್ ವಾಹನದಲ್ಲಿದ್ದ ಕೆಲವರಿಗೆ ಸನ್ಣ ಪುಟ್ಟ ಗಾಯಗಳಗಿದ್ದು, ಅವರು ವೈದ್ಯಕೀಯ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಸ್ಥಳಕ್ಕೆ ಹನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.