ಮಹಾಮಾರಿ ಕೊರೊನಾ ವೈರಸ್‍ಗೆ ದೇವರ ಪಟ್ಟಕಟ್ಟಿ ವಿಶೇಷವಾಗಿ ಪೂಜೆ ಸಲ್ಲಿಸಿದ ತುಮಕೂರು ಜನತೆ…

152
firstsuddi

ತುಮಕೂರು : ದೇಶಾದ್ಯಂತ ಭೀತಿ ಹೆಚ್ಚಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್ ತೊಲಗುವಂತೆ ಜಿಲ್ಲೆಯ ಜನರು ಕೊರೊನಾ ವೈರಸ್‍ಗೆ ದೇವರ ಪಟ್ಟವನ್ನು ಕಟ್ಟಿ ವಿಶೇಷವಾಗಿ ಪೂಜೆ ಸಲ್ಲಿಸುತ್ತಿದ್ದಾರೆ. ನಗರ ಸೇರಿದಂತೆ ಜಲ್ಲೆಯ ಜನರು ಗ್ರಾಮಗಳ ಹೊರವಲಯದಲ್ಲಿ ಮಣ್ಣಿನಲ್ಲಿ ಎಮ್ಮೆಯ ಪ್ರತಿರೂಪವನ್ನು ತಯಾರಿಸಿ ಅದಕ್ಕೆ “ಕೊರೊನಾ ಅಮ್ಮ” ಎಂದು ಹೆಸರಿಡಲಾಗಿದ್ದು, ಬಳಿಕ ಈ ಪ್ರತಿರೂಪಕ್ಕೆ ತೆಂಗಿನ ಕಾಯಿ ಒಡೆದು ಆರತಿ ಬೆಳಗಿ ಮಹಾಮಾರಿ ವೈರಸ್ ತೊಲಗುವಂತೆ ಜನರು ಪ್ರಾರ್ಥಿಸುತ್ತಿದ್ದಾರೆ.