ನವದೆಹಲಿ : ಮಹಾರಾಷ್ಟ್ರದ 12 ಮಂದಿ ಬಿಜೆಪಿ ಶಾಸಕರ ಅಮಾನತು ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ.
ಸ್ಪೀಕರ್ ಚೇಂಬರ್ ನಲ್ಲಿ ಸಭಾಧ್ಯಕ್ಷ ಭಾಸ್ಕರ್ ಜಾಧವ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು 12 ಬಿಜೆಪಿ ಶಾಸಕರನ್ನು 2021ರ ಜುಲೈ 5 ರಂದು ವಿಧಾನಸಭೆಯಿಂದ ಒಂದು ವರ್ಷದವರೆಗೆ ಅಮಾನತುಗೊಳಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸ್ಪೀಕರ್ ಆದೇಶವನ್ನು ನ್ಯಾ. ಎಎಂ ಖಾನ್ವಿಲ್ಕರ್, ನ್ಯಾ. ದಿನೇಶ್ ಮಹೇಶ್ವರಿ, ನ್ಯಾ. ಸಿಟಿ ರವಿಕುಮಾರ್ ಅವರಿದ್ದ ತ್ರಿಸದಸ್ಯ ಪೀಠ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.
ಶಾಸಕರಾದ ಸಂಜಯ್ ಕುಟೆ, ಪರಾಗದ ಅಲವ್ನಿ, ಅಭಿಮನ್ಯು ಪವಾರ್, ಆಶಿಶ್ ಶೆಲಾರ್, ಗಿರೀಶ್ ಮಹಾಜನ್, ಅತುಲ್ ಭಟ್ಕಲ್ಕರ್, ಹರೀಶ್ ಪಿಂಪಾಲೆ, ವಿಜಯ್ ಕುಮಾರ್ ರಾವಲ್, ಯೋಗೇಶ್ ಸಾಗರ್, ರಾಮ್ ಸತ್ಪುಟೆ, ಕೀರ್ತಿಕುಮಾರ್ ಬಾಂಗ್ಡಿಯಾ, ನಾರಾಯಣ್ ಕುಚೆ ಅವರು ಅಮಾನತುಗೊಂಡಿದ್ದರು.










