ಮಹಾ ದುರಂತ ಕ್ರಿಕೆಟ್ ಆಡುವಾಗಲೇ ಕುಸಿದು ಬಿದ್ದು ಆಲ್‍ರೌಂಡರ್ ಸಾವು.

43

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ದುರ್ಘಟನೆಯೊಂದು ನಡೆದಿದೆ. ಕ್ರಿಕೆಟ್ ಆಡುವಾಗಲೇ ಬ್ಯಾಟರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ ಕ್ರಿಕೆಟಿಗ ಇಮ್ರಾನ್ ಪಟೇಲ್  ಲೀಗ್ ಪಂದ್ಯ ಆಡುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 35ರ ಹರೆಯದ ಇಮ್ರಾನ್ ಗರ್ವಾರೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಲೀಗ್ ಪಂದ್ಯದಲ್ಲಿ ಆರಂಭಿಕರಾಗಿ ಪ್ರವೇಶಿಸಿದ್ದರು. ಆದರೆ. ಪಂದ್ಯದ ನಡುವೆಯೇ ಇಮ್ರಾನ್ ಪ್ರಾಣ ಬಿಟ್ಟಿದ್ದಾರೆ. ಇದರಿಂದ ಇಮ್ರಾನ್ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಇಮ್ರಾನ್ ತಂಡದ ಪರ ಬ್ಯಾಟಿಂಗ್ ಮಾಡುವಾಗ ಸತತ ಎರಡು ಬೌಂಡರಿಗಳನ್ನು ಬಾರಿಸಿದ್ದರು. ಕೆಲವು ಓವರ್‌ಗಳು ಬ್ಯಾಟಿಂಗ್ ಮಾಡಿದ ನಂತರ ಏಕಾಏಕಿ ಅವರ ಕುತ್ತಿಗೆ ಮತ್ತು ಕೈಗಳಲ್ಲಿ ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ಸ್ವತಃ ಇಮ್ರಾನ್ ಕೂಡ ಅಂಪೈರ್‍ಗೆ ತಿಳಿಸಿ ಪೆವಿಲಿಯನ್ ಕಡೆಗೆ ಹೋಗಲಾರಂಭಿಸಿದ್ದಾರೆ. ಆದರೆ, ಪೆವಿಲಿಯನ್ ತಲುಪುವ ಮುನ್ನವೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ ಸಹ ಆಟಗಾರರು ಇಮ್ರಾನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು ಯಾವುದೇ ಪ್ರಯೋಜನವಾಗದೇ ಕೊನೆಯುಸಿರೆಳೆದಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ಇಮ್ರಾನ್ ಮೂರನೇ ಬಾರಿಗೆ ತಂದೆಯಾಗಿದ್ದರು. ಇದೀಗ ಅವರು ತಾಯಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇಮ್ರಾನ್ ಪಟೇಲ್ ಅವರ ಸಹ ಆಟಗಾರ ನಸೀರ್ ಖಾನ್ ಅವರು ಪಂದ್ಯದ ಮೊದಲು ಆಟಗಾರನಿಗೆ ಯಾವುದೇ ಸಮಸ್ಯೆಗಳು ಕಾಣಿಸಿಕೊಂಡಿರಲಿಲ್ಲ. ಅಲ್ಲದೇ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಕೂಡಾ ಇರಲಿಲ್ಲ ಫಿಟ್ ಆಗಿದ್ದರು.