ಮಾಜಿ ಸಚಿವ ಡಿಕೆಶಿ ಅವರನ್ನು ಭೇಟಿಯಾದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

392
firstsuddi

ನವದೆಹಲಿ : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಬೆಳಿಗ್ಗೆ ತಿಹಾರ್ ಜೈಲಿಗೆ ತೆರಳಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಜೈಲಿನಲ್ಲಿ ಇರುವುದರಿಂದ ಅವರಿಗೆ ಧೈರ್ಯ ಹೇಳಲು ನಾವೆಲ್ಲ ಬಂದಿದ್ದೇವೆ. ಆದರೆ ಡಿ.ಕೆ. ಶಿವಕುಮಾರ್ ಮಾನಸಿಕವಾಗಿ ದೈರ್ಯದಲ್ಲಿ ಇದ್ದಾರೆ. ಬಂದಿರುವ ಎಲ್ಲ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ರಾಜಕೀಯ ವಿಚಾರಗಳು ಭಿನ್ನವಾಗಿರುತ್ತವೆ. ಆದರೆ ನಮ್ಮಿಬ್ಬರ ವೈಯಕ್ತಿಕ ಒಡನಾಟ ಚೆನ್ನಾಗಿದೆ. ಅದು ರಾಜಕೀಯಕ್ಕಿಂತ ಭಿನ್ನವಾದದ್ದು. ಇದು ನನ್ನ ವೈಯಕ್ತಿಕ ಭೇಟಿ. ಡಿ.ಕೆ. ಶಿವಕುಮಾರ್ ಅವರು ಸದ್ಯ ರಾಜಕೀಯ ದ್ವೇಷವನ್ನು ಎದುರಿಸುತ್ತಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಮಾಡಿದವರಿಗೆ ಜನರು ಪಾಠ ಕಲಿಸಲಿದ್ದಾರೆ ಎಂದರು.