ಉಗ್ರ ನೆಲೆಗಳ ಮೇಲೆ ಫಿರಂಗಿ ದಾಳಿ ನಡೆಸಿದ ಭಾರತೀಯ ಸೇನೆ-20ಕ್ಕೂ ಹೆಚ್ಚು ಪಾಕ್ ಯೋಧರು ಹಾಗೂ ಉಗ್ರರು ಹತ…

677
firstsuddi

ಶ್ರೀನಗರ : ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ ಉಗ್ರರ ಅಡುಗುತಾಣಗಳ ಮೇಲೆ ಭಾರತೀಯ ಸೇನೆ ಫಿರಂಗಿ ದಾಳಿ ನಡೆಸಿದ್ದು, ದಾಳಿಯಲ್ಲಿ ಸಾವು-ನೋವು ಹಾಗೂ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಜಮ್ಮು ಕಾಶ್ಮೀರದ ತಂಗ್ಧರ್ ಸೆಕ್ಟರ್‍ನಲ್ಲಿ ಇರುವ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು, ಪಾಕಿಸ್ತಾನ ಸೇನೆ ತಂಗ್ಧರ್ ಸೆಕ್ಟರ್‍ನಲ್ಲಿ ಕದಾನ ವಿರಾಮ ಉಲ್ಲಂಘಿಸಿತ್ತು. ಇದರಿಂದಾಗಿ ಭಾರತೀಯ ಸೇನೆಯ ಇಬ್ಬರು ಯೋಧರು ಹಾಗೂ ಓರ್ವ ನಾಗರಿಕರು ಮೃತಪಟ್ಟಿದ್ದರು. ಹೀಗಾಗಿ ಭಾರತೀಯ ಸೇನೆ ಭಾರತದೊಳಗೆ ನುಸುಳಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಉಗ್ರ ನೆಲೆಗಳ ದಾಳಿ ನಡೆಸಿದ್ದಾರೆ ಎಂದು ಮೂಗಳಿಂದ ತಿಳಿದು ಬಂದಿದ್ದು, ದಾಳಿಯಲ್ಲಿ ಒಂದು ಮನೆ ಹಾಗೂ ಅಕ್ಕಿ ಗೋಡೋನ್ ಸಂಪೂರ್ಣ ನಾಶವಾಗಿದೆ. ಭಾರತೀಯ ಸೇನಾ ಮಾಹಿತಿ ಪ್ರಕಾರ ತಂಗ್ಧರ್ ಸೆಕ್ಟರ್‍ನಲ್ಲಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿದಕ್ಕೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿದ್ದು, ದಾಳಿಯಲ್ಲಿ ಪಾಕಿಸ್ತಾನಕ್ಕೆ ಭಾರಿ ಹಾನಿ ಸಂಭವಿಸಿದೆ ಎಂದು ತಿಳಿಸಿದೆ.