ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ…

74
firstsuddi

ಮಂಡ್ಯ : ಮಾಜಿ ಸಚಿವ ಹಾಗೂ ಬಿಜೆಪಿ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಗೆ ಕಾನೂನು ಕಂಟಕ ಎದುರಾಗಿದೆ. ಸರಿಯಾಗಿ ಬಾಡಿಗೆ, ಕಂದಾಯ ಪಾವತಿಸದ ಹಿನ್ನೆಲೆ ನಿಶಾ ಯೋಗೇಶ್ವರ್ ವಿರುದ್ಧ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಕಾನೂನು ಹೋರಾಟಕ್ಕೆ ನಿರ್ಧರಿಸಿದೆ.

ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಮಾಲಕಿ. ಕಂಪನಿ 2017ರಲ್ಲಿ ಗೋದಾಮು ಬಾಡಿಗೆಗೆ ಪಡೆದಿತ್ತು. ಮಂಡ್ಯ ಜಿಲ್ಲೆಯ ಮದ್ದೂರಿನ ಟಿಎಪಿಸಿಎಂಎಸ್ ಗೆ ಸೇರಿದ ಗೋಡೌನ್ ಬಾಡಿಗೆ ಪಡೆದಿದ್ದರು. ಆದರೆ 2018ರ ಏಪ್ರಿಲ್​ನಿಂದ ಬಾಡಿಗೆ ಮತ್ತು ಕಂದಾಯ ಪಾವತಿಸಿಲ್ಲ. ಗೋದಾಮು ಬಾಡಿಗೆ 42.47 ಲಕ್ಷ ರೂ. ಹಣ ಬಾಕಿ ಇದೆ. ಪುರಸಭೆಯ ಕಂದಾಯ ಬಾಕಿ 4.78 ಲಕ್ಷ ರೂಪಾಯಿ ಇದೆ. ಹೀಗಾಗಿ ಕಾನೂನು ಹೋರಾಟಕ್ಕೆ ಟಿಎಒಇಸಿಎಂಎಸ್ ನಿರ್ಧಾರ ಮಾಡಿದೆ.