ಕೊರೊನಾ ಆರಂಭವಾದಾಗಿನಿಂದಲೂ ಕೂಡ ಮಾಸ್ಕ್ ಜೀವನ ಮುಂದುವರೆಯುತ್ತಿದೆ. ಹೀಗಿರುವಾಗ ದಕ್ಷಿಣ ಕೊರಿಯಾದ ಮಾಸ್ಕ್ ತಯಾರಿಕಾ ಕಂಪನಿಯು ವಿಶಿಷ್ಟವಾದ ಮಾಸ್ಕ್ ನ್ನು ತಯಾರಿಸಿದೆ. ತಿನ್ನುವಾಗ ಮತ್ತು ಕುಡಿಯುವಾಗಲೂ ಈ ಮಾಸ್ಕ್ ಧರಿಸಬಹುದು. ಈ ವಿಶಿಷ್ಟ ಮಾಸ್ಕ್ ಜಾಗತಿಕವಾಗಿ ವಿವಿಧ ವೆಬ್ ಸೈಟ್ ಗಳಲ್ಲಿ ಮಾರಾಟವಾಗುತ್ತಿದೆ.
ಈ ಮಾಸ್ಕ್ ಗೆ “ಕೋಸ್ಕ್” ಎಂದು ಕೊರಿಯನ್ ಭಾಷೆಯಲ್ಲಿ ಹೆಸರಿಡಲಾಗಿದೆ. ಈ ವಿಚಿತ್ರ ಮಾಸ್ಕ್ ನೋಡಿ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಕಮೆಂಟ್ ನೀಡುತ್ತಿದ್ದಾರೆ. ಓರ್ವರು ಚಾಕಲೇಟ್ ನಿಂದ ತಯಾರಿಸಿದ ಟೀ ಪಾಟ್ ಗಳನ್ನೇನಾದರೂ ಮಾರುತ್ತಿದ್ದಾರಾ ಎಂದು ಟೀಕಿಸಿದರೆ, ಮತ್ತೊಬ್ಬರು ಮುಂದಿನ ಹಂತದ ಮೂರ್ಖತನ! ಎಂದು ಕಾಮೆಂಟ್ ಮಾಡಿದ್ದಾರೆ. ತಮ್ಮ ಮೂಗಿನ ಕೆಳಗೆ ಮಾಸ್ಕ್ ಧರಿಸುವ ಜನರಿಗೆ ಇದು ಭಿನ್ನವಾಗಿಲ್ಲ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಇನ್ನೂ ಈ ವಿಶಿಷ್ಟ ಮಾಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕಾರಣ, ಕೊರೊನಾ ವೈರಸ್ ಬಾಯಿಯ ಮೂಲಕವೂ ತಗುಲುತ್ತದೆ ಎಂದು ಜನರು ನಂಬಿದ್ದಾರೆ. ಪರಿಣಾಮ ಬಾಯಿಯನ್ನು ಮುಚ್ಚದ ಮಾಸ್ಕ್ ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸಹ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.










