ಉಡುಪಿ: ಅಪರಿಚಿತ ವ್ಯಕ್ತಿಯೋರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಚೇರಿಯ ಹೆಸರಿನಲ್ಲಿ ಸುಳ್ಳು ಈ-ಮೇಲ್ ಐಡಿಯನ್ನು ಸೃಷ್ಟಿಸಿ ಸಂದೇಶ ಕಳುಹಿಸಿದ ಕುರಿತು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 1ರಂದು 04:48 ಗಂಟೆಗೆ ಯಾರೋ ಅಪರಿಚಿತ ವ್ಯಕ್ತಿ cm@karnataka.gov.in ಎಂಬ ನಕಲಿ ಮೇಲ್ ಐ.ಡಿ.ಯನ್ನು ಸೃಷ್ಟಿಸಿ, ಅದರಲ್ಲಿ Shri.B.S.Yadiyurappa, Hon`ble Chief Minister, Room no. 323A, 3rd Floor, Vidhanasoudha, Bangalore-01 ಎಂಬುದಾಗಿ ಬರೆದು, ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಮಂತ್ರಿ ಕಛೇರಿಯಿಂದಲೇ ಮೇಲ್ ಕಳುಹಿಸಿದ ರೀತಿಯಲ್ಲಿ, ಪಿರ್ಯಾದಿದಾರರಾಧ ಡಾ. ನಾರಾಯಣ ಸಭಾಹಿತ್, ನಿರ್ದೇಶಕರು, ರಿಜಿಸ್ಟರ್, ಅಕಾಡಮೆ ಆಫ್ ಹೈಯರ್ ಎಜ್ಯೂಕೇಶನ್, ಮಣಿಪಾಲ ಇವರು ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುವ ಮಣಿಪಾಲ ರಿಜಿಸ್ಟರ್ ವಿಭಾಗದ ಮೇಲ್ ಐ.ಡಿ.ಗೆ We have received several emails and complaints from parents and students all around the globe regarding MAHE plan to re open colleges. The condition is not suitable as of now to open the colleges in Nov/Dec-2020. This mail is to make MAHE management aware that it is not allowed to open any colleges on or before 2nd Jan-2021. After 2nd Jan-2021, if plan to reopen you need to collect parent`s consent to send their wards back to collage ಎಂಬುದಾಗಿ ಸಂದೇಶವನ್ನು ಕಳುಹಿಸಿರುತ್ತಾನೆ.
ಈ ಮೂಲಕ ದುಷ್ಕರ್ಮಿ, ಮುಖ್ಯ ಮಂತ್ರಿಯವರ ಈ-ಮೇಲ್ ಐ.ಡಿ.ಯನ್ನು ಕದ್ದು, ಅದೇ ರೀತಿಯಾಗಿ ಸುಳ್ಳು ಈ-ಮೇಲ್ ಐ.ಡಿ.ಯನ್ನು ಅವರ ಹೆಸರಿನಲ್ಲಿ ಸೃಷ್ಟಿಸಿ, ಸದ್ರಿ ಈ-ಮೇಲ್ ಸಂದೇಶವನ್ನು ಮುಖ್ಯ ಮಂತ್ರಿಯವರೇ ಕಳುಹಿಸಿದ್ದಾಗಿ ಎನ್ನುವ ರೀತಿಯಲ್ಲಿ ಸಂಸ್ಥೆಗೆ ತಪ್ಪು ಮಾಹಿತಿಯನ್ನು ನೀಡಿ, ನಂಬಿಸಿ, ವಂಚಿಸಲಾಗಿದೆ ಎಂದು ಸೆನ್ ಅಪರಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










