ಮುರುಘಾ ಶರಣರ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ : ಆರಗ ಜ್ಞಾನೇಂದ್ರ.

84
firstsuddi

ಶಿವಮೊಗ್ಗ : ಮುರುಘಾ ಮಠದ ಶಿವಮೂರ್ತಿ ಶರಣರ ವಿಚಾರದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮುರುಘಾ ಶ್ರೀಗಳ ಪ್ರಕರಣ ಈಗ ಕೋರ್ಟ್ ನಲ್ಲಿದೆ. ಇದರಿಂದ ನಾನು ಹೆಚ್ಚಿಗೆ ಏನೂ ಮಾತನಾಡುವುದಿಲ್ಲ. ಪೊಲೀಸರು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿದ್ದಾರೆ. ಮುರುಘಾಮಠಕ್ಕೆ ಸೂಕ್ತ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ. 7 ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದ ಪ್ರಮುಖ ಆರೋಪಿ ಜಬೀವುಲ್ಲಾಗೆ ಭಯೋತ್ಪಾದಕರ ಜೊತೆ ಲಿಂಕ್ ಇದೆ. ಸದ್ಯದಲ್ಲೇ ಈ ಪ್ರಕರಣ ಎನ್ ಐಎಗೆ ಹಸ್ತಾಂತರ ಮಾಡ್ತೇವೆ. ಚಾಕು ಇರಿತ ಶಿವಮೊಗ್ಗದಲ್ಲಿ ಶಾಂತಿ ಇದೆ ಎಂದರು.

ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಿದ್ದು, ನಮ್ಮ ಕಾರ್ಯಕರ್ತರಿಗೆ ಒಂದು ರೀತಿಯ ಉಲ್ಲಾಸ ತಂದಿದೆ. ಮೋದಿ ಅವರಿಗೆ ರಾಜ್ಯದ ಬಗ್ಗೆ ವಿಶೇಷ ಆಸಕ್ತಿ ಇದೆ. ಇದರಿಂದ ಅವರು ಮುಂದೆ ರಾಜ್ಯಕ್ಕೆ ತಿಂಗಳಿಗೊಮ್ಮೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಬಿಜೆಪಿಯವರು ಯಾವಾಗಲೂ ಚುನಾವಣೆಗೆ ಸಿದ್ಧರಾಗಿರುತ್ತೇವೆ ಎಂದರು.