ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನ ಬರ್ಬರ ಕೊಲೆ…

57
firstsuddi

ಕೋಲಾರ : ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರೊಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಆಪ್ತ ಜಗನ್ ಮೋಹನ್ ಕೊಲೆಯಾದವರು. ಇಂದು ಬೆಳಗ್ಗೆ ಮುಳಬಾಗಿಲು ನಗರದ ಮುತ್ಯಾಲಪೇಟೆಯಲ್ಲಿರುವ ಗಂಗಮ್ಮ ದೇವಾಲಯದ ಮುಂಭಾಗವೇ ಅಪರಿಚಿತರ ಗುಂಪೊಂದು ಜಗನ್ ಮೋಹನ್ ಅವರ ಮೇಲೆ ದಾಳಿ ಮಾಡಿ ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ನಾಲ್ವರು ದುಷ್ಕರ್ಮಿಗಳ ತಂಡ ಈ ಕೃತ್ಯ ಎಸಗಿದ್ದಾರೆ ಎನ್ನಲಾಗ್ತಿದೆ. ಸ್ಥಳಕ್ಕೆ ಮುಳಬಾಗಿಲು ಡಿವೈಎಸ್ಪಿ ಗೌರಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.