ಮೂಡಿಗೆರೆ:ಗುತ್ತಿಹಳ್ಳಿ, ಮೂಲರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಕಾಳಿಂಗ ಸರ್ಪಗಳ ಭೀತಿ…

948
ಮೂಡಿಗೆರೆ : ತಾಲೂಕಿನ  ಗುತ್ತಿಹಳ್ಳಿ, ಮೂಲರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಕಾಳಿಂಗ ಸರ್ಪಗಳ ಭೀತಿ ಉಂಟಾಗಿದೆ. ಸಂಜೆ 6 ಗಂಟೆ ಬಳಿಕ ರಸ್ತೆಯಲ್ಲಿ ಓಡಾಡುವ ಜನರಿಗೆ ಕಾಳಿಂಗ ಸರ್ಪಗಳು ಸಂಬಂಧಿಗಳಂತೆ ಸಿಕ್ತಿರೋದ್ರಿಂದ ಮಲೆನಾಡಿಗರು ಕಂಗಾಲಾಗಿದ್ದಾರೆ. ಇಂದು ಸಂಜೆ ಕೂಡ ಗುತ್ತಿಹಳ್ಳಿ ಗ್ರಾಮದ ಪ್ರವೀಣ್ ಎಂಬುವರು ಮನೆಗೆ ಬರುವಾಗ ಮಂಜುನಾಥ್ ಎಂಬುವರು ತೋಟದಿಂದ ಬೃಹತ್ ಕಾಳಿಂಗ ಸರ್ಪವೊಂದು  ರಸ್ತೆ ಇಳಿದಿದೆ. ಕಾಳಿಂಗನನ್ನ  ಕಂಡ ಪ್ರವೀಣ್ ಆತಂಕಕ್ಕೀಡಾಗಿ ಗಾಡಿ ನಿಲ್ಲಿಸಿ, ಕಾಳಿಂಗ ಹೋದ ಬಳಿಕ ಮನೆಗೆ ಹೋಗಿದ್ದಾರೆ. ಇಂತಹಾ ಪ್ರಕರಣ ಇದೇ ಮೊದಲಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹಾ ಹಲವು ಪ್ರಕರಣಗಳಿವೆ. ಇದರಿಂದ ಮಲೆನಾಡಿನ ಜನ ಆತಂಕಕ್ಕೀಡಾಗಿದ್ದಾರೆ. ಕಳೆದ ಹಲವು ದಶಕಗಳಿಂದ ಮಲೆನಾಡಿನ ಜನ ಆನೆ ಹಾವಳಿಯಿಂದ ಕಂಗಾಲಾಗಿದ್ದರು. ಸಂಜೆ ಆರು ಗಂಟೆ ಬಳಿಕ ಮನೆಯಿಂದ ಆಚೆ ಬರೋದಕ್ಕೂ ಹಿಂದೇಟು ಹಾಡುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಕಾಡಾನೆಗ ಹಿಂಡು ಗ್ರಾಮಕ್ಕೆ ಭೇಟಿ ಕೊಡುತ್ತಿದ್ದವು. ಮನಸ್ಸೋ ಇಚ್ಛೆ ಹಾವಳಿ ನಡೆಸಿ ಹೋಗುತ್ತಿದ್ದವು. ಜನ ಜೀವ ಭಯದಿಂದ ಮನೆಯಿಂದ ಹೊರ ಬರುತ್ತಿರಲಿಲ್ಲ. ಮೂಡಿಗೆರೆ ತಾಲೂಕಿನಲ್ಲಿ ಆನೆ ಹಾವಳಿಗೆ ಎರ್ಡ್ಮೂರು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಆದರೀಗ, ಮಲೆನಾಡಲ್ಲಿ ಆನೆ ಹಾವಳಿ ಜೊತೆ ಕಾಳಿಂಗ ಸರ್ಪಗಳ ಕಾಟ ಕೂಡ  ಆರಂಭಗೊಂಡಿದ್ದು ಮಲೆನಾಡಿನ ಜನ ಭಯಭೀತರಾಗಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.