ಮೂಡಿಗೆರೆ:ಹ್ಯಾಂಡ್‍ಪೋಸ್ಟ್ ಚೌಳಿಕೆರೆ ಎಸ್ಟೇಟ್ ಸಮೀಪ ಕಾಡೆಮ್ಮೆ ಹಾಡುಹಗಲೇ ಪ್ರತ್ಯಕ್ಷ…

420

ಮೂಡಿಗೆರೆ: ಹ್ಯಾಂಡ್‍ಪೋಸ್ಟ್ ಸಮೀಪದ ಚೌಳಿಕೆರೆ ಎಸ್ಟೇಟ್ ಬಳಿ ಕಾಡೆಮ್ಮೆಯೊಂದು ಬೆಳಂಬೆಳಿಗ್ಗೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯಬೀತರಾಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ನಾಡಿನತ್ತ ಬರುತ್ತಿದ್ದು ಕಾಡುಪ್ರಾಣಿಗಳಿಗೂ ಮಾನವನಿಗೂ ಸಂಘರ್ಷ ಏರ್ಪಡುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಕಾಡುಪ್ರಾಣಿಗಳು ನಿರ್ಭೀತವಾಗಿ ಜನನಿಭಿಡ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ಅಭಿವೃದ್ದಿಯ ನೆಪದಲ್ಲಿ ಮಲೆನಾಡಿನ ಕಾಡುಗಳನ್ನು ಕಡಿದು ಪವರ್ ಲೈನ್ ಮತ್ತು ಪೆಟ್ರೋಲಿಯಂ ಪೈಪ್ ಲೈನ್‍ಗಳನ್ನು ಮಾಡಿದ್ದು ಇನ್ನೊಂದೆಡೆ ಅರಣ್ಯ ಭೂಮಿಯನ್ನು ಒತ್ತುವರಿದಾರರು ಒತ್ತುವರಿ ಮಾಡಿದ್ದು ಕಾಡುಪ್ರಾಣಿಗಳು ಇದರಿಂದ ನಾಡಿನತ್ತ ಲಗ್ಗೆ ಇಡುತ್ತಿವೆ. ಇಂದು ಮೂಡಿಗೆರೆಯಲ್ಲಿ ಕಾಣಿಸಿಕೊಂಡ ಕಾಡೆಮ್ಮೆ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ಬದಿಯಲ್ಲೆ ವಾಕ್ ಮಾಡುತ್ತಿರುವ ದೃಶ್ಯ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ವಿಡೀಯೋ ಹಾಗೂ ಪೋಟೋ ಕ್ಲಿಕಿಸುವುದು ಕಂಡು ಬಂತು.