ಮೂಡಿಗೆರೆ : ಅಗ್ರಹಾರ ಶ್ರೀ ಆದಿಸುಬ್ರಹ್ಮಣ್ಯ ಸ್ವಾಮಿಗೆ ಇಂದು ಬೆಳ್ಳಿ ರಥೋತ್ಸವ…

676
firstsuddi

ಮೂಡಿಗೆರೆ : ತಾಲ್ಲೂಕಿನ ಗೋಣಿಬೀಡು ಜಿ.ಅಗ್ರಹಾರದಲ್ಲಿರುವ ಶ್ರೀ ಆದಿಸುಬ್ರಹ್ಮಣ್ಯ ಜಾತ್ರೆ ನಾಳೆ ನಡೆಯಲಿದ್ದು, ಇದರ ಅಂಗವಾಗಿ ಮುನ್ನಾದಿನವಾದ ಇಂದು ಬೆಳ್ಳಿ ರಥೋತ್ಸವವನ್ನು ನಡೆಸಲಾಯಿತು. ಶ್ರೀ ಆದಿ ಸುಬ್ರಹ್ಮಣ್ಯ ದೇವರ ಮೂಲ ವಿಗ್ರಹವನ್ನು ಉತ್ಸವದೊಂದಿಗೆ ಕರೆತಂದು ಬೆಳ್ಳಿರಥದಲ್ಲಿ ರಥಾರೋಹಣ ಮಾಡಿಸಿ ರಥವನ್ನು ಎಳೆಯಲಾಯಿತು. ಸ್ವಾಮಿಯ ದರ್ಶನಕ್ಕೆ ವಿವಿಧ ಊರಿನವರು ಹಾಗೂ ಸ್ಥಳೀಯ ಗ್ರಾಮಸ್ಥರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುನೀತರಾದರು.