ಮೂಡಿಗೆರೆ : ಅಡ್ಯಂತಾಯ ಕಾಂಪ್ಲೆಕ್ಸ್ ಮುಂಭಾಗ ಕೊಳೆತು ನಾರುತ್ತಿರುವ ಕಸದ ರಾಶಿ-ಸಾರ್ವಜನಿಕರ ಆಕ್ರೋಶ…

615
firstsuddi

ಮೂಡಿಗೆರೆ : ಪಟ್ಟಣದ ಕೆ.ಎಂ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಮೀಪವಿರುವ ಅಡ್ಯಂತಾಯ ಕಾಂಪ್ಲೆಕ್ಸ್ ಮುಂಭಾಗದ ಪಾರ್ಕಿಂಗ್ ನಲ್ಲಿ ಕಸದ ರಾಶಿ ಕೊಳೆತು ದುರ್ವಾಸನೆ ಬೀರುತ್ತಿದ್ದು, ಜನರಿಗೆ ನರಕಯಾತನೆ ಉಂಟುಮಾಡಿದೆ.
ಇದರ ಪಕ್ಕದಲ್ಲೇ ಖಾಸಗಿ ಆಸ್ಪತ್ರೆ, ಬ್ಯಾಂಕ್‍ಗಳು, ಮೆಡಿಕಲ್, ಲ್ಯಾಬ್‍ಗಳು ಇದ್ದು, ಸಾವಿರಾರು ಜನರು ಓಡಾಡುವ ರಸ್ತೆಯಾಗಿದ್ದು, ಸ್ಥಳೀಯರಿಗೆ ಹಾಗೂ ವಾಹನ ಸವಾರರಿಗೆ ಕಿರಿಕಿರಿಯಾಗಿದೆ. ಹಲವು ಬಾರಿ ಇಲ್ಲಿ ಕಸ ಹಾಕದಂತೆ ಮನವಿ ಮಾಡಿದರೂ ಸಮೀಪದ ರಸ್ತೆಯಲ್ಲಿ ಬಿದ್ದ ಎಲ್ಲಾ ಕಸವನ್ನು ತಂದು ಸಿಬ್ಬಂದಿಗಳು ಇಲ್ಲಿ ರಾಶಿ ಹಾಕುತ್ತಿದ್ದಾರೆ. 3 ರಿಂದ 4 ದಿನಗಳಾದರೂ ಕಸ ವಿಲೇವಾರಿ ಮಾಡುವುದಿಲ್ಲ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವ ಪ್ರಯೋಜನವೂ ಆಗಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕಸವನ್ನು ಕೂಡಲೇ ವಿಲೇವಾರಿ ಮಾಡಿಸಬೇಕು ಹಾಗೂ ಇಲ್ಲಿ ಕಸ ಹಾಕುವುದನ್ನು ತಡೆಯಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.