ಮೂಡಿಗೆರೆ : ಶ್ರೀಮತಿ ಶಶಿಕಲಾ ಎಂ.ಬಿ.ಗೋಪಾಲಗೌಡ ಅವರು 1993 ನೇ ಅಕ್ಟೋಂಬರ್ 21 ರಂದು ಮೂಡಿಗೆರೆ ಜೀವವಿಮಾನಿಗಮ ಶಾಖೆಯ ವಿಮಾ ಅಭಿವೃದ್ದಿ ಅಧಿಕಾರಿ ಜೆ.ಎನ್.ಜೆ. ಲೋಬೋ ಅವರ ಹತ್ತಿರ ಜೀವವಿಮಾ ಸಲಹೆಗರರಾಗಿ ಕಾರ್ಯ ನಿರ್ವಹಿಸುವ ಮೂಲಕ ಜೀವ ವಿಮಾ ಪಾಲಿಸಿಯಲ್ಲಿ ಅನೇಕ ಸಾಧನೆಗಳನ್ನು ಮಾಡುವುದರ ಮೂಲಕ ಜನರ ಮೆಚ್ಚುಗೆಗೆ ಪಾತ್ರಾಗಿದ್ದಾರೆ.
ಮೂಡಿಗೆರೆ ಜೀವ ವಿಮಾ ಪ್ರತಿನಿಧಿಯಾಗಿ 4 ವರ್ಷಗಳಲ್ಲಿ ಜೀವವಿಮೆಯ ಅತ್ಯುತ್ತಮ ಕ್ಲಬ್ ಆದ ಛೇರ್‍ಮನ್ ಕ್ಲಬ್ ಸದಸ್ಯರಾಗಿ 20 ವರ್ಷಗಳು ಆಗಿದ್ದು. ಹಾಗೂ ಅಂತರಾಷ್ಟ್ರೀಯ ಕ್ಲಬ್ ಆದ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಎಂಡಿಆರ್‍ಟಿ ಕ್ಲಬ್ ಸದಸ್ಯರಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತವಾಗಿ 10 ನೇ ಬಾರಿ ಆಯ್ಕೆಯಾಗಿ ಸದಸ್ಯರಾಗಿರುವುದು ಇವರ ಒಂದು ಸಾಧನೆ.
ಜೀವವಿಮೆಯಲ್ಲಿ ದಿನಕ್ಕೊಂದು ಪಾಲಿಸಿಯಂತೆ ವರ್ಷಕ್ಕೆ 365 ಪಾಲಿಸಿ ಮತ್ತು ತಿಂಗಳಿಗೆ 365 ಪಾಲಿಸಿಗಳು ಮತ್ತು ಒಂದು ವರ್ಷಕ್ಕೆ ಸಾವಿರಕ್ಕೂ ಅಧಿಕ ಪಾಲಿಸಿ ಮಾಡಿಸಿದ್ದು ಇವರ ಮತ್ತೊಂದು ಸಾಧನೆ.
ಈಗ 1993 ರಿಂದ 2020 ರವರಗೆ ಸರಿಸುಮಾರು 10 ಸಾವಿರಕ್ಕೂ ಅಧಿಕ ಜನರಿಗೆ ವಿಮೆ ಪಾಲಿಸಿ ಮಾಡಿಸುವುದರ ಮೂಲಕ ಅದರ ಪ್ರಯೋಜನ ಕೊಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಜೀವ ವಿಮೆ ಮಾಡಿಸುವುದರಲ್ಲಿ ಅನೇಕ ದಾಖಲೆಗಳನ್ನು ಮಾಡಿರುತ್ತಾರೆ.
ದಂಪತಿಗಳ ಸಾಧನೆಯನ್ನು ಗುರುತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಡೆ ಅವರು ಸನ್ಮಾನಿಸಿ ಅಭಿನಂದಿಸಿದ್ದಾರೆ. ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಚಿನ್ನದ ಪದಕ, ಬೆಳ್ಳಿ ಪದಕ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಇತ್ತೀಚೆಗೆ ಉಡುಪಿ ವಿಭಾಗ ಕಛೆರಿಯಲ್ಲಿ ನಡೆದ ಎಂಡಿಆರ್‍ಟಿ ಸಮಾವೇಶದಲ್ಲಿ ವಿಮಾ ವಲಯ ಮಾರುಕಟ್ಟೆ ವಿಭಾಗದ ವಲಯಾಧಿಕಾರಿ ಎಂ.ಜಗನ್ನಾಥ್, ವಿಭಾಗಾಧಿಕಾರಿ ಅನಂತಪದ್ಮನಾಭ್ ಸೇರಿದಂತೆ ಇತರೆ ಅಧಿಕಾರಿಗಳು ಶ್ರೀಮತಿ ಶಶಿಕಲಾ ಎಂ.ಬಿ.ಗೋಪಾಲಗೌಡ ದಂಪತಿಗಳಿಗೆ ಸನ್ಮಾನಿಸಿ ಅಭಿನಂದಿಸಿದ್ದಾರೆ.
ಎಂ.ಬಿ.ಗೋಪಾಲಗೌಡರು ಅನೇಕ ಸಂಘಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ. ಮೂಡಿಗೆರೆ ಲಯನ್ಸ್ ಕ್ಲಬ್ ಸಂಸ್ಥೆಯಲ್ಲಿ 2 ಬಾರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ಮಕ್ಕಳಾದ ತೇಜಸ್ವಿ ಗೋಪಾಲಗೌಡ ಮತ್ತು ಯಶಸ್ವಿನಿ ಗೋಪಾಲಗೌಡ ಅವರೊಂದಿಗೆ ಬೀಜುವಳ್ಳಿಯ ಮಾತೃಶ್ರೀ ಹಾಲಮ್ಮ ನಿಲಯದ ಜೀವನ್-ಜ್ಯೋತಿ ಎಸ್ಟೇಟ್‍ನಲ್ಲಿ ಜೀವನ ನಡೆಸುತ್ತಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಎಲ್ಐಸಿ ಎಂಡಿಆರ್‍ಟಿ ಸದಸ್ಯರಾದ ಶ್ರೀಮತಿ ಶಶಿಕಲಾ ಎಂ.ಬಿ.ಗೋಪಾಲಗೌಡ ದಂಪತಿಗಳಿಗೆ ಉಡುಪಿ ವಿಮಾಧಿಕಾರಿಗಳಿಂದ ಸನ್ಮಾನ…










