ಬಣಕಲ್ : ಮೂಡಿಗೆರೆ ತಾಲ್ಲೂಕು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ದೆ ಏರ್ಪಡಿಸಲಾಗಿದೆ ಎಂದು ತಾಲ್ಲೂಕು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಆರ್ ಪ್ರಕಾಶ್ ಹೇಳಿದರು.
ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಕಾಲೇಜು, ಫ್ರೌಡಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ಮೂರು ವಿಭಾಗದಲ್ಲಿ ಪ್ರಬಂಧಗಳನ್ನು ಮೂರು ಪುಟಗಳಿಗೆ ಮೀರದಂತೆ ಅಂಚೆ ಮೂಲಕ ಸ್ಪರ್ದಿಗಳು ಕಳಿಸಿಕೊಡಬೇಕು. ಪ್ರತಿ ವಿಭಾಘದಲಲಿ ವಿಜೇತರಾದವರಿಗೆ ಪ್ರತಿ ವಿಭಾಗಕ್ಕೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು. ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ದಿಗಳೀಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಪ್ರಬಂಧಗಳನ್ನು ಕಳುಹಿಸಲು ಫೆಬ್ರವರಿ 20 ಕೊನೆಯ ದಿನಾಂಕವಾಗಿದ್ದು ಪ್ರಬಂಧವನ್ನು ಆರ್ ಪ್ರಕಾಶ್, ಶಿಕ್ಷಕರು ಹಾಗೂ ಅಧ್ಯಕ್ಷರು, ತಾಲ್ಲೂಕು ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷರು ರಾಮೇಗೌಡ ಬಡಾವಣೆ ಬಿಳುಗುಳ ಹೆಸಗಲ್ ಅಂಚೆ ಮೂಡಿಗೆರೆ ತಾಲ್ಲೂಕು ಈ ವಿಳಾಸಕ್ಕೆ ಕಳಿಸಿ ಕೊಡಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9480525413 ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.










