ಮೂಡಿಗೆರೆ : ಕಾಫಿ ತೋಟದಲ್ಲಿ ಮಲಗಿದ್ದ ಸುಮಾರು 14 ಅಡಿ ಉದ್ದದ ಹೆಬ್ಬಾವು ಸೆರೆ…

512
firstsuddi

ಮೂಡಿಗೆರೆ : ಕಾಫಿ ತೋಟದಲ್ಲಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡು ಜನರು ಭಯಭೀತರಾಗಿರುವ ಘಟನೆ ತಾಲ್ಲೂಕಿನ ಮೈದಾಡಿ ಗ್ರಾಮದಲ್ಲಿ ನಡೆದಿದೆ. ಶ್ರೀನಿವಾಸಗೌಡ ಎಂಬುವವರ ಕಾಫಿ ತೋಟದಲ್ಲಿ ಸುಮಾರು 14 ಅಡಿ ಉದ್ದದ ಹೆಬ್ಬಾವನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದು, ಕೂಡಲೇ ಮಾಲೀಕ ಶ್ರೀನಿವಾಸಗೌಡ ಅವರು ಉರಗತಜ್ಞ ರಿಜ್ವಾನ್ ಎಂಬುವವರಿಗೆ ಕರೆ ಮಾಡಿ ಮಾಹಿತಿಯನ್ನು ತಿಳಿಸಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ರಿಜ್ವಾನ್ ಅವರು ಹೆಬ್ಬಾವನ್ನು ಸೆರೆಹಿಡಿದಿದ್ದು, ಸೆರೆಸಿಕ್ಕ ಹಾವಿನೊಂದಿಗೆ ಸ್ಥಳೀಯರು ಫೋಟೋ ತೆಗೆಸಿಕೊಂಡು ಖುಷಿಪಟ್ಟರು. ಬಳಿಕ ಹೆಬ್ಬಾವನ್ನು ಕುದುರೆಮುಖ ಅರಣ್ಯಕ್ಕೆ ಬಿಡಲಾಯಿತು. ಈ ವೇಳೆ ಕಳಸ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಡಾ ಉಪಸ್ಥಿತರಿದ್ದರು.