ಮೂಡಿಗೆರೆ : ಕಾಯ ಅಳಿದರೂ ಕೀರ್ತಿ ಉಳಿಯಬೇಕು : ತಹಸೀಲ್ದಾರ್ ರಮೇಶ್.

309
firstsuddi

ಮೂಡಿಗೆರೆ : ಕಾಯ ಅಳಿದರೂ ಕೀರ್ತಿ ಉಳಿಯಬೇಕು. ಉತ್ತರ ಸಿಗದ ಆಚರಣೆಗಳು ಮೌಡ್ಯಗಳು ಎನಿಸಿಕೊಳ್ಳುತ್ತವೆ. ಸಮಾಜ ಸುದಾರಣೆಗಾಗಿ ಸೇವೆಗೆ ಜೀವನ ಮುಡಿಪಿಟ್ಟ ಧೀಮಂತ ವ್ಯಕ್ತಿ ಬಸವಣ್ಣ ಅವರ ವಚನಗಳು ಜನಜೀವನಕ್ಕೆ ಮಾರ್ಗದರ್ಶಿ ಎಂದು ಮೂಡಿಗೆರೆ ತಹಸೀಲ್ದಾರ್ ಎಚ್.ಎಂ.ರಮೇಶ್ ಹೇಳಿದರು.

ಅವರು ಇಂದು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹಬ್ಬಗಳ ಆಚರಣೆ, ತಾಲ್ಲೂಕು ಆಡಳಿತ ವತಿಯಿಂದ ನಡೆದ ಬಸವಣ್ಣ ಜಯಂತಿಯ ಸರಳ ಆಚರಣೆಯಲ್ಲಿ ಅವರು ಮಾತನಾಡಿದರು.

‘ಹನ್ನೆರಡನೇ ಶತಮಾನದಲ್ಲಿ ಉನ್ನತ ಹುದ್ದೆಯನ್ನು ಬಿಟ್ಟು ಸಮಾನತೆಗಾಗಿ ಸಮಾಜ ಮುಖಿ ಸೇವೆಗಾಗಿ ಬಸವಣ್ಣನವರು ಶ್ರಮಿಸಿದರು. ತಮ್ಮ ಜೀವನದ ಅನುಭವದ ಕಾರಣದಿಂದಲೇ ಅನುಭವ ಮಂಟಪವನ್ನು ಸ್ಥಾಪಿಸಿದರು. ಬಸವಣ್ಣನವರ ವಷನಗಳನ್ನು ತಿಳಿದುಕೊಳ್ಳುವುದರಿಂದ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.ದೀನ ದಲಿತರ ಏಳಿಗೆಗಾಗಿ ಬಸವಣ್ಣ ಶ್ರಮಿಸಿದರು.’ ಎಂದು ಹೇಳಿದರು.

ತಾಲ್ಲೂಕು ಕಚೇರಿಯ ಶಿರಸ್ತೇದಾರ ಸತ್ಯನಾರಾಯಣ್, ಚುನಾವಣಾ ಶಿರಸ್ತೇದಾರ ಸಂತೋಷ್, ಸಂಜಯ್‍ಗೌಡ ಮತ್ತಿತರರು ಇದ್ದರು.