ಮೂಡಿಗೆರೆ : ಕೆಂಬತ್ತುಮಕ್ಕಿ ರಾಜಣ್ಣ ಅವರ ಬೆಳೆ ಹಾನಿಯಾದ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಪಧಾಧಿಕಾರಿಗಳು ಭೇಟಿ…

438
firstsuddi

ಮೂಡಿಗೆರೆ : ದಾರದಹಳ್ಳಿಯ ರೈತ ಕೆಂಬತ್ತುಮಕ್ಕಿ ರಾಜಣ್ಣ ಅವರ ಬೆಳೆ ಹಾನಿಯಾದ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಪಧಾಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅವರು ಮಾತನಾಡಿ ಈ ಬಾರಿಯ ಅತಿವೃಷ್ಟಿಯಿಂದ ಮಲೆನಾಡು ಭಾಗದಲ್ಲಿ ರೈತರಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ. ಮಳೆಯಿಂದಾಗಿ ಕಾಫಿ ನೆಲ ಕಚ್ಚಿದ್ದು ಅಡಿಕೆ, ಬಾಳೆ ಮುಂತಾದ ಬೆಳೆಗಳಿಗೆ ಹಾನಿಯಾಗಿದ್ದು ಸರ್ಕಾರ ನೆರವಿಗೆ ಬರಬೇಕಿದೆ ಎಂದರು.
ರೈತ ಸಂಘದ ರಾಜ್ಯ ಮಹಿಳಾ ಉಪಾಧ್ಯಕ್ಷೆ ವನಶ್ರೀ ಲಕ್ಷ್ಮಣಗೌಡ ಅವರು ಮಾತನಾಡಿ ರೈತ ರಾಜಣ್ಣ ಅವರ ಸುಮಾರು 9 ಸಾವಿರ ಬಾಳೆಗಿಡಗಳಿ ಗಾಳಿ ಮಳೆಯಿಂದ ನೆಲಕಚ್ಚಿದೆ. 25 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಸಚಿವರು, ಮೇಲಾಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಸೂಕ್ತ ಪರಿಹಾರದ ಭರವಸೆ ನೀಡಿದ್ದು ಸರ್ಕಾರ ಶೀಘ್ರದಲ್ಲಿ ಪರಿಹಾರ ನೀಡಿ ರೈತರಿಗೆ ನೆರವಾಗುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಪುಟ್ಟಸ್ವಾಮಿಗೌಡ, ರೈತಮುಖಂಡರಾದ ನಾಗೇಶಗೌಡ, ಲಕ್ಷ್ಮಣಗೌಡ, ಮುಂತಾದವರು ಇದ್ದರು.