ಮೂಡಿಗೆರೆ: ಪಟ್ಟಣದ ಬಹುತೇಕ ಶಾಲೆಗಳಲ್ಲಿ ಇಂದಿನ ದಿನಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸುವುದು ಸಾಮಾನ್ಯವಾಗಿದ್ದು ಅದರಲ್ಲಿ ಪಟ್ಟಣದ ಮೇಗಲಪೇಟೆಯಲ್ಲಿರುವ ಪ್ರಸಿದ್ದ ಶಾಲೆಗಳಲ್ಲೊಂದಾದ ಬಿ.ಜಿ.ಎಸ್ ಪಿಯೂ ಕಾಲೇಜಿನಲ್ಲಿ ಹೊರಾಂಗಣದಲ್ಲಿ ಶಾಲೆಯ ಹೆಸರನ್ನೂ ಸಹ ಕನ್ನಡದಲ್ಲಿ ಹಾಕಿಸದೇ ಕನ್ನಡಕ್ಕೆ ಅವಮಾನ ಎಸಗಿದ್ದಾರೆ ಎಂದು ಹಿರಿಯ ಪತ್ರಕರ್ತರು ಹಾಗೂ ಕನ್ನಡಪರ ಹೋರಾಟಗಾರರಾದ ಹೊರಟ್ಟಿ ರಘು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಬಹುತೇಕ ಶಾಲೆಗಳಲ್ಲಿ ಇಂದಿನ ದಿನಗಳಲ್ಲಿ ಕನ್ನಡವನ್ನು ಪಠ್ಯವಿಷಯದಲ್ಲಿ ಅಳವಡಿಸಲು ಖಾಸಗಿ ಶಾಲೆಯವರು ಹಿಂಜರಿಯುತ್ತಿದ್ದು, ಇದು ನಮ್ಮ ಕನ್ನಡ ನಾಡಿಗೆ ಬಗೆಯುವ ಬಹುದೊಡ್ಡ ದ್ರೋಹವಾಗಿದೆ. ಈ ಬಾರಿ 10 ನೇ ತರಗತಿಯ ಬಹುತೇಕ ವಿದ್ಯಾರ್ಥಿಗಳು ಕನ್ನಡದಲ್ಲಿ ಅತಿ ಕಡಿಮೆ ಅಂಕವನ್ನು ಪಡೆದಿದ್ದು, ಇದು ಕನ್ನಡ ವಿಷಯದಲ್ಲಿ ಇಲ್ಲಿನ ಸ್ಥಳೀಯ ಶಾಲೆಗಳು ಅನುಸರಿಸುತ್ತಿರುವ ನೀತಿಯನ್ನು ಸಾರುತ್ತದೆ ಎಂದರು.
ಪಟ್ಟಣದ ಬಿ.ಜಿ.ಎಸ್ ಶಾಲೆಯ ಆಡಳಿತ ಮಂಡಳಿಯೊಂದಿಗೆ ಶಾಲೆಯ ಹೆಸರನ್ನು ಕನ್ನಡ ನಾಮಫಲಕದೊಂದಿಗೆ ಹಾಕಿ ಇದರಿಂದ ನಿಮ್ಮ ಶಾಲೆಯ ಘನತೆ ಎಚ್ಚುವುದಲ್ಲದೇ ಇದರಿಂದ ನಿಮ್ಮ ಶಾಲೆಯಲ್ಲಿ ಕನ್ನಡಕ್ಕೆ ಕೊಟ್ಟ ಚಿಕ್ಕ ಕೊಡುಗೆಯಾದೀತು ಎಂದು ಮೌಖಿಕವಾಗಿ ಆರು ತಿಂಗಳ ಹಿಂದೆ ನಾನು ತಿಳಿಸಿದ್ದು, ಅಂದು ನನಗೆ ಆದಷ್ಟು ಬೇಗ ನಮ್ಮ ಶಾಲೆಯ ಹೊರಾಂಗಣದಲ್ಲಿ ದೊಡ್ಡದಾಗಿ ಶಾಲೆಯ ಹೆಸರನ್ನು ಕನ್ನಡದಲ್ಲಿ ಹಾಕಿಸುವ ಭರವಸೆಯನ್ನು ನೀಡಿದ್ದು, ಆದರೆ ಇದುವರೆಗೂ ಅವರಿಂದ ಅಸಾಧ್ಯವಾಗಿದ್ದು, ಮತ್ತು ಈ ನಾಮಫಲಕವನ್ನು ಅಳವಡಿಸುವ ಕಡೆ ಗಮನವನ್ನು ಕೊಡದೇ ಕನ್ನಡಕ್ಕೆ ಅವಮಾನಿಸಿರುತ್ತಾರೆ.
ಕನ್ನಡದಲ್ಲಿ ಶಾಲೆಯ ಹೆಸರು ಹಾಗೂ ಇತರೆ ಪ್ರಮುಖ ಸೂಚನಾ ಫಲಕ ಆಂಗ್ಲ ಬಾಷೆಯಲ್ಲೇ ಸ್ಪಷ್ಟವಾಗಿ ಗೋಚರಿಸುತ್ತಿದ್ದು ಕನ್ನಡ ಕೇವಲ ಎಲ್ಲೋ ಒಂದು ಕಡೆ ನಾಮಕಾವಸ್ತೆಗೆ ಹಾಕಿರುವುದು ಬಿಟ್ಟರೆ ಅದು ಸಹ ಸ್ಪಷ್ಟವಾಗಿ ಗೋಚರಿಸುವುದಿಲ್ಲ.ಇನ್ನು ಮುಂದಾದರು ಈ ಶಾಲೆಯ ಆಡಳಿತ ಮಂಡಳಿ ಆದಷ್ಟು ಬೇಗ ಎಚ್ಚೆತ್ತು ಶಾಲೆಯ ಹೊರಗಡೆ ಹಾಗೂ ಒಳಾಂಗಣದಲ್ಲಿ ಕನ್ನಡ ನಾಮಫಲಕ ಹಾಕಿಸದಿದ್ದಲ್ಲಿ ಶಾಲೆಯ ವಿರುದ್ದ ಎಲ್ಲಾ ಕನ್ನಡ ಪರ ಸಂಘಟನೆಗಳ ಜೊತೆ ಸೇರಿ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಖಾಸಗಿ ಶಾಲೆಯಲ್ಲಿ ಕನ್ನಡವನ್ನು ನಿರ್ಲಕ್ಷಿಸಿದರೆ ಹೋರಾಟದ ಎಚ್ಚರಿಕೆ – ಹೊರಟ್ಟಿ ರಘು…










