ಮೂಡಿಗೆರೆ : ಮಲೆನಾಡು ಭಾಗಗಳಲ್ಲಿ ಕಳೆದ ಒಂದು ತಿಂಗಳಿಂದ ರಣಭೀಕರ ಮಳೆ ಹಿನ್ನೆಲೆ, ಚಾರ್ಮಾಡಿ ಘಾಟ್‍ನಲ್ಲಿ ಪದೇ ಪದೇ ಗುಡ್ಡ ಕುಸಿತ ಹಾಗೂ ಭೂ ಕುಸಿತ ಹಿನ್ನೆಲೆ, ಜಿಲ್ಲಾಡಳಿತ ವಾಹನ ಸಂಚಾರವನ್ನು ನಿಷೇಧಿಸಿ ಆದೇಶ ಮಾಡಿತ್ತು. ತಿಂಗಳ ಬಳಿಕ ಮತ್ತೆ ಚಾರ್ಮಾಡಿ ಘಾಟ್‍ನಲ್ಲಿ ವಾಹನ ಸಂಚಾರ ಹಿನ್ನೆಲೆ, ಮಂಗಗಳಿಗೆ ಖುಷಿಯೋ ಖುಷಿಯಾಗಿದ್ದು, ಎರಡು ತಿಂಗಳಿಂದ ತಿನ್ನೋಕೆ ಆಹಾರವಿಲ್ಲದೇ ಪರದಾಡುವಂತಾಗಿತ್ತು. ಕೋತಿಗಳ ಕೂಗು ಭಗವಂತನಿಗೂ ಕೇಳಿಸಿದ್ದು, ಹಸಿವಿನ ದಾಹ ದೈವದ ಒಡಲು ಮುಟ್ಟಿದ್ದು, ಹಣ್ಣು ಕೊಟ್ಟವರಿಗೆ ಖುಷಿಪಡಿಸಿ ಕೊಡದಿದ್ದವರಿಗೆ ಹೆದರಿಸುತ್ತಿದ್ದ ಮಂಗಗಳ ಮುಖದಲ್ಲಿ ಕಳೆದ ಒಂದು ತಿಂಗಳಿಂದ ಚೈತನ್ಯವೇ ಇರಲಿಲ್ಲ. ನೆಲದ ಮೇಲಿದ್ದರೂ ನೀರು, ಮರದ ಮೇಲಿದ್ದರೂ ನೀರು. ತಿನ್ನೋಕೆ ಆಹಾರವಿಲ್ಲದೇ ಸಪ್ಪೆ ಮುಖದಲ್ಲಿ ಸೊರಗಿ ಹೋಗಿದ್ದ ಕೋತಿಗಳು ಮತ್ತೆ ಜನರನ್ನು ಕಂಡು ಆಹಾರವಿಲ್ಲದೇ ನೀರು ಕುಡಿದು ಬದುಕಿದ್ದ ಮಂಗಗಳ ಮುಖದಲ್ಲಿ ಮಂದಹಾಸ ಮೂಡಿದೆ. ವಾಹನಗಳನ್ನು ಕಂಡು ವಾಹನಗಳ ಮೇಲೆ ಹತ್ತುತ್ತಿರುವ ಮಂಗಗಳಿಗೆ ಆಹಾರ ಹಾಕುತ್ತಿರುವ ಪ್ರವಾಸಿಗರು. ಹೌದು ಈ ದೃಶ್ಯ ಕಂಡುಬಂದಿದ್ದು ತಾಲ್ಲೂಕಿನ ಚಾರ್ಮಾಡಿ ಘಾಟ್‍ನಲ್ಲಿ ಹೌದು, ನಾವು ಮನುಷ್ಯರನ್ನು ಕಂಡು ಎರಡು ತಿಂಗಳಾಯಿತು. ಏನಾದರೂ ಇದ್ದರೆ ಕೊಡ್ರೋ ಊಟ ಹುಡುಕಿಕೊಂಡು ಹೋದರೆ ಬರಿ ಮರಳು ತುಂಬಿದ ಸಿಮೆಂಟ್ ಮೂಟೆಗಳು ಸಿಗುತ್ತವೆ. ನನ್ನ ಮೇಲೆ ಕೋಪ ಇದ್ದರೆ ಒಂದು ಏಟು ಹೊಡೆದು ಬಿಡಿ… ಏನಾದರೂ ಇದ್ದರೆ ಕೊಡಿ ಪ್ಲೀಸ್! ಅಂತಿದ್ದಾವೆ ಮಂಗಗಳು. ಈ ವರ್ಷ ಮಲೆನಾಡಿನಲ್ಲಿ ವರುಣನ ರಾಕ್ಷಸತ್ವಕ್ಕೆ ಮಲೆನಾಡು ಸಂಪೂರ್ಣ ಜಲಾವೃತಗೊಂಡಿತ್ತು. ಚಾರ್ಮಾಡಿ ರಸ್ತೆಯು 23 ಕಿ.ಮೀ ವ್ಯಾಪ್ತಿಯಲ್ಲಿ 40 ಕಡೆ ಗುಡ್ಡ ಕುಸಿದು ಎರಡು ತಿಂಗಳಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಮಾರ್ಗದಲ್ಲಿ ಪ್ರವಾಸಿಗರಿಲ್ಲದೆ ಬದುಕಿದ್ದ ಕೋತಿಗಳ ಸಂತತಿ ತಿನ್ನೋಕೆ ಆಹಾರವಿಲ್ಲದೆ ನೀರು ಕುಡಿದು ಬದುಕುತ್ತಿದ್ದು, ಅವುಗಳ ಹಸಿವಿನ ದಾಹ ಆಂಜನೇಯ ಸ್ವಾಮಿಗೂ ಮುಟ್ಟಿತ್ತು ಅನ್ನಿಸುತ್ತೆ ಇದೀಗ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸಂಚಾರಕ್ಕೆ ಅನುಮತಿ ನೀಡಿರುವುದು ಹೊಟ್ಟೆ ತುಂಬಾ ಊಟ ಸಿಗುತ್ತೆ ಎಂಬ ಒಂದೇ ಒಂದು ಕಾರಣಕ್ಕೆ ಮನುಷ್ಯರಿಗಿಂತ ಮಂಗಗಳಿಗೆ ಡಬಲ್ ಖುಷಿಯಾಗಿದೆ.









