ಕೊಟ್ಟಿಗೆಹಾರ : ಕಳೆದ ಕೆಲದಿನಗಳಿಂದ ಚಾರ್ಮಾಡಿ ಘಾಟ್ನ ಅಣ್ಣಪ್ಪಸ್ವಾಮಿ ದೇವಸ್ಥಾನದ ಸಮೀಪ ಕ್ರೈನ್ವೊಂದು ಕೆಟ್ಟು ನಿಂತಿದ್ದು ಸಂಚಾರಕ್ಕೆ ತೊಂದರೆಯಾಗಿದೆ.
ರಸ್ತೆಗೆ ಹೊಂದಿಕೊಂಡಂತೆ ರಸ್ತೆ ಬದಿಯಲ್ಲಿ ಕ್ರೈನ್ ನಿಂತಿರುವುದರಿಂದ ರಸ್ತೆಯ ಎರಡು ಬದಿಯಲ್ಲಿ ಏಕಕಾಲಕ್ಕೆ ವಾಹನಗಳು ಬಂದಾಗ ಸಂಚರಿಸಲು ತೊಂದರೆಯಾಗಿದೆ. ಜಿಲ್ಲಾಧಿಕಾರಿಗಳು ಸರ್ಕಾರಿ ಕೆಂಪು ಬಸ್ಸು ಹಾಗೂ 6 ಚಕ್ರದ ವಾಹನಗಳ ಸಂಚಾರಕ್ಕೆ ಚಾರ್ಮಾಡಿ ಘಾಟ್ನಲ್ಲಿ ಅವಕಾಶ ನೀಡಿದ್ದು ಈ ಮಾರ್ಗವಾಗಿ ಸಂಚರಿಸುವ ವಾಹನಗಳ ಸಂಖ್ಯೆಯೂ ಕೂಡ ಹೆಚ್ಚಿದೆ. ಸಂಬಂಧಪಟ್ಟ ಅಧಿಕಾರಿ ರಸ್ತೆ ಬದಿಯಲ್ಲಿ ನಿಂತ ಕ್ರೈನ್ನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.










