ಮೂಡಿಗೆರೆ : ಜಾವಳಿ ಗ್ರಾ.ಪಂ ವ್ಯಾಪ್ತಿಯ ಪುರದಮಕ್ಕಿ ಗ್ರಾಮದ ಯುವಕರಿಂದ ಶ್ರಮದಾನ…

172
firstsuddi

ಕೊಟ್ಟಿಗೆಹಾರ : ಜಾವಳಿ ಗ್ರಾ.ಪಂ ವ್ಯಾಪ್ತಿಯ ಪುರದಮಕ್ಕಿ ಗ್ರಾಮದ ಯುವಕರು ಗ್ರಾಮದ ವಿದ್ಯುತ್ ಟ್ರಾನ್ಸ್‍ಪಾರ್ಮರ್ ಸುತ್ತಮುತ್ತ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸುವ ಮೂಲಕ ಶ್ರಮದಾನ ಮಾಡಿದರು.
ಪುರದಮಕ್ಕಿ ಗ್ರಾಮದ ಮೂಲಕ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ತಗುಲುವ ಮರದ ಕೊಂಬೆಗಳನ್ನು ತೆರವುಗೊಳಿಸಿದರು. ವಿದ್ಯುತ್ ಕಂಬಗಳ ಬಳಿ ಬೆಳೆದು ನಿಂತಿದ್ದ ಆಳೆತ್ತರದ ಕುರುಚಲು ಗಿಡಗಳನ್ನು ಕಡಿದು ಸ್ವಚ್ಚಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪುರದಮಕ್ಕಿ ಗ್ರಾಮಸ್ಥರಾದ ಅಭಿಷೇಕ್ ಜಾವಳಿ, ಮನೋಹರ್, ಅವಿನಾಶ್, ಸುನೀಲ್, ಅಭಿಕಿರಣ್, ರವಿ, ರತೀಶ್, ಪ್ರಣೀತ್, ಸಂದೀಪ್ ಮುಂತಾದವರು ಇದ್ದರು.