ಮೂಡಿಗೆರೆ : ಜಾವಳಿ ಸಮೀಪ ಆಟೋ ಪಲ್ಟಿ-ಕಾರ್ಮಿಕ ಸಾವು…

564
firstsuddi

ಮೂಡಿಗೆರೆ : ಆಟೋ ಪಲ್ಟಿಯಾಗಿ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಬಾಳೂರು ಸಮೀಪದ ಜಾವಳಿಯಲ್ಲಿ ನಡೆದಿದೆ. ರಾಮಚಂದ್ರ(50) ಮೃತಪಟ್ಟ ಕಾರ್ಮಿಕ ಎನ್ನಲಾಗಿದ್ದು, ಕಾಫಿ ತೋಟದ ಕೂಲಿ ಕೆಲಸಕ್ಕಾಗಿ ಕಾಳಿಕಟ್ಟೆಯಿಂದ ಜಾವಳಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಸುಮಾರು 10 ಜನ ಕೂಲಿ ಕಾರ್ಮಿಕರು ಆಟೋದಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಾಮಚಂದ್ರ, ಮಂಜುನಾಥ್ ಹಾಗೂ ಪ್ರವೀಣ್ ಅವರನ್ನು ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ದಾಖಲಿಸಿದ್ದು, ರಾಮಚಂದ್ರ ಅವರಿಗೆ ಹೆಚ್ಚಿನ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸುತ್ತಿದ್ದಾಗ ಬೆಳ್ತಂಗಡಿ ತಾಲ್ಲೂಕಿನ ಕಕ್ಕುಂಜೆ ಬಳಿ ಮೃತಪಟ್ಟಿದ್ದು, ಅಪಘಾತಕ್ಕೆ ಚಾಲಕನ ಅತಿ ವೇಗ ಹಾಗೂ ಹೆಚ್ಚಿನ ಜನ ಆಟೋದಲ್ಲಿ ಪ್ರಯಾಣಿಸಿದ್ದೆ ಕಾರಣ ಎನ್ನಲಾಗಿದ್ದು, ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.