ಕೊಟ್ಟಿಗೆಹಾರ : ಕೋಶ ಓದು ದೇಶ ನೋಡು ಬಳಗ ಹಾಗೂ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಜನವರಿ 9 ಮತ್ತು 10 ರಂದು ಎರಡು ದಿನಗಳ ಸಂವಾದ ಹಾಗೂ ತೇಜಸ್ವಿ ಓದು ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದೆ.
ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜನವರಿ 9 ರಂದು ನಡೆಯುವ ಸಂವಾದ ಕಾರ್ಯಕ್ರಮದ ಉದ್ಘಾಟನೆಯನ್ನು ಲೇಖಕರಾದ ಡಾ.ನರೇಂದ್ರ ರೈ ದೇರ್ಲ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮುನೀರ್ ಕಾಟಿಪಳ್ಳ ಅವರು ವಹಿಸಲಿದ್ದು, ಅತಿಥಿಗಳಾಗಿ ರಾಜೇಶ್ವರಿ ತೇಜಸ್ವಿ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ನಿರ್ದೇಶಕ ಡಾ.ರಮೇಶ್, ಪ್ರತಿಷ್ಠಾನದ ಸದಸ್ಯ ಆರ್.ರಾಘವೇಂದ್ರ ಭಾಗವಹಿಸಲಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಕೆ.ಪಿ.ಸುರೇಶ, ಸಬಿತಾ ಬನ್ನಾಡಿ, ಪೂರ್ಣೇಶ್ ಮತ್ತಾವರ ಭಾಗವಹಿಸುವರು.
ಜನವರಿ 10 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕುಮಟಾದ ಡಾ.ಎಂ.ಜಿ. ಹೆಗಡೆ, ವಕೀಲ ಸುಧೀರ್ ಕುಮಾರ್ ಮುರೋಳ್ಳಿ, ಚಿತ್ರ ಕಲಾವಿದ ಬಾಪು ದಿನೇಶ್, ಸಹಮತದ ಐವನ್ ಡಿಸಿಲ್ವ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಕೆರೆಕೋಣ ಸಹಯಾನದ ಡಾ.ವಿಠ್ಠಲ ಭಂಡಾರಿ ವಹಿಸುವರು ಎಂದು ಚಿಕ್ಕಮಗಳೂರು ಸಹಮತ ಸಂಸ್ಥೆಯ ಸ್ಥಾಪಕರಾದ ಐವನ್ ಡಿ’ಸಿಲ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










