ಮೂಡಿಗೆರೆ :ತರುವೆ ಗ್ರಾ.ಪಂ.ಖಾಯಂ ಪಿಡಿಒ ನೇಮಿಸಲು ಒತ್ತಾಯ.   

48

 ಕೊಟ್ಟಿಗೆಹಾರ: ಇಲ್ಲಿನ ತರುವೆ ಗ್ರಾ.ಪಂ.ಯಲ್ಲಿ ಖಾಯಂ ಪಿಡಿಒ ಇಲ್ಲದೇ ವರ್ಷವೇ ಕಳೆದಿದ್ದು ಅಭಿವೃದ್ದಿ ಕುಂಠಿತವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಭಾಕರ್ ಬಿನ್ನಡಿ ಹೇಳಿದರು. ಅವರು ಸುದ್ದಿಗಾರರೊಂದಿಗೆ  ಮಾತನಾಡಿ’ ತರುವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತಿಗೆರೆ, ಬಿನ್ನಡಿ,ದೇವನಗೂಲ್,ಅಜಾದ್ ನಗರ ಮತ್ತಿತರ ಗ್ರಾಮದ ಗ್ರಾಮಸ್ಥರ ಯಾವುದೇ ಕೆಲಸಗಳು ಆಗುತ್ತಿಲ್ಲ.ಇಲ್ಲಿ ಇದ್ದ ಪಿಡಿಒ ಅವರು ವರ್ಷದ ಹಿಂದೆ ವರ್ಗಾವಣೆಯಾಗಿರುವುದರಿಂದ ಇಲ್ಲಿಗೆ  ವಿವಿಧ ಗ್ರಾಮ ಪಂಚಾಯಿತಿ ಪಿಡಿಒಗಳನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗಿದೆ.ಆದರೆ ಅವರಿಗೆ ಎರಡೆರಡು ಗ್ರಾಮ ಪಂಚಾಯಿತಿ ಕೆಲಸ ನಿಭಾಯಿಸುವುದು ಕಷ್ಟ ಸಾಧ್ಯವಾಗಿದೆ.ಅವರು ವಾರಕ್ಕೊಮ್ಮೆ ಬರುತ್ತಿದ್ದು ಕೆಲಸ ಕಾರ್ಯಗಳು ಸಾಗುತ್ತಿಲ್ಲ.ಈ ಬಗ್ಗೆ ಯಾವುದೇ ಹಿರಿಯ ಅಧಿಕಾರಿಗಳು ಮಾಹಿತಿ ಗೊತ್ತಿದ್ದರೂ ಕ್ರಮ ಕೈಗೊಳ್ಳದೇ ತರುವೆ ವ್ಯಾಪ್ತಿಯ ಗ್ರಾಮಸ್ಥರ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ.ತರುವೆ ಗ್ರಾಮಪಂಚಾಯಿತಿಯು ಅಧಿಕಾರಿಗಳ ನಿರ್ಲಕ್ಷ್ಯದ ಗ್ರಾಮ ಪಂಚಾಯಿತಿಯಾಗಿ ಮಾರ್ಪಟ್ಟಿದೆ.ಸಂಬಂಧಿಸಿದ ಅಧಿಕಾರಿಗಳು ತರುವೆ ಗ್ರಾಮ ಪಂಚಾಯಿತಿಗೆ ಖಾಯಂ ಪಿಡಿಒ ನೇಮಿಸಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.ಪಿಡಿಒ ನೇಮಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿಯೂ ಅವರು ಹೇಳಿಕೆ ಮುಖೇನ ಎಚ್ಚರಿಸಿದ್ದಾರೆ