ಮೂಡಿಗೆರೆ : ತಾಲ್ಲೂಕಿನಾದ್ಯಂತ ಸುರಿದ ಧಾರಕಾರ ಮಳೆಗೆ ರಸ್ತೆಗೆ ಉರುಳಿದ ವಿದ್ಯುತ್ ಕಂಬ…

204
firstsuddi

ಕೊಟ್ಟಿಗೆಹಾರ : ಬಣಕಲ್ ಸುತ್ತಮುತ್ತಾ ಸಂಜೆ ಧಾರಾಕಾರ ಮಳೆಯಾಗಿದ್ದು, ಸಂಜೆ 6-30 ರ ಸುಮಾರಿಗೆ ಬೆಟ್ಟಗೆರೆ ಗ್ರಾಮದ ಮುಖ್ಯರಸ್ತೆಯಲ್ಲಿ ವಿದ್ಯುತ್ ಕಂಬ ರಸ್ತೆಗುರುಳಿದೆ.
ರಸ್ತೆಗೆ ವಿದ್ಯುತ್ ಕಂಬ ಉರುಳಿದ ಹಿನ್ನಲೆಯಲ್ಲಿ ದ್ವಿಚಕ್ರ ವಾಹನ ಸಂಚಾರ ಹೊರತು ಪಡಿಸಿ ಇತರ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ವಿದ್ಯುತ್ ಕಂಬ ಉರುಳಿದ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಂಡಿದ್ದ ಕಾರಣ ಅವಘಡ ಸಂಭವಿಸುವುದು ತಪ್ಪಿದಂತಾಗಿದೆ.