ಮೂಡಿಗೆರೆ : ನದಿಯಲ್ಲಿ ಕಾಲುಜಾರಿ ಬಿದ್ದು ಮಹಿಳೆ ಸಾವು…

321
firstsuddi

ಕೊಟ್ಟಿಗೆಹಾರ: ನದಿಯಲ್ಲಿ ಕಾಲುಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹೆಮ್ಮಕ್ಕಿ ಸಮೀಪದ ಸುಭದ್ರಾ ನದಿಯಲ್ಲಿ ನಡೆದಿದೆ.
ಬಿಳಗಲಿಯ ಸರೋಜ (35) ಮೃತ ಪಟ್ಟ ದುರ್ದೈವಿ. ಮೃತ ಮಹಿಳೆ ಮಂಗಳವಾರದಂದು ಹೆಮ್ಮಕ್ಕಿ ಸಮೀಪದ ಯಳಂದೂರಿನ ತೋಟವೊಂದಕ್ಕೆ ಕೆಲಸಕ್ಕೆಂದು ಹೋದ ವೇಳೆ ನದಿಗೆ ಕಾಲುಜಾರಿ ಬಿದ್ದು ಮೃತಪಟ್ಟಿದ್ದು 6 ದಿನ ಕಳೆದರೂ ಮೃತ ಸರೋಜ ಅವರ ಪತಿ ಅಣ್ಣಪ್ಪ ಎಲ್ಲೆಡೆ ಹುಡುಕಾಟ ನಡೆಸಿ ಬಾಳೂರು ಠಾಣೆಗೆ ಕಾಣೆಯಾದ ಬಗ್ಗೆ ದೂರು ನೀಡಲು ಬಂದಿದ್ದರು. ಸುತ್ತಮುತ್ತೆಲ್ಲಾ ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿ ನಂತರ ಬರುವಂತೆ ಪೊಲೀಸರು ತಿಳಿಸಿದರು.
ಭಾನುವಾರ ಹೆಮ್ಮಕ್ಕಿ ಸಮೀಪ ಸುಭದ್ರಾ ನದಿಗೆ ಮೀನು ಹಿಡಿಯಲು ಹೋದ ಸ್ಥಳೀಯರು ಮೃತ ದೇಹ ಪತ್ತೆಯಾಗಿರುವ ಬಗ್ಗೆ ಕಳಸ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದಾಗ ಮೃತ ದೇಹ ಸರೋಜ ಎಂಬುವವರದು ಎಂದು ಪತ್ತೆಯಾಗಿದೆ. ನದಿಯಲ್ಲಿದ್ದ ಮೃತದೇಹವನ್ನು ಸಮಾಜಸೇವಕ ಆರೀಪ್ ಹೊರ ತಗೆದಿದ್ದು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಕಳಸ ಠಾಣೆ ಪಿಎಸ್‍ಐ ಮಂಜಯ್ಯ, ವೃತ್ತ ನಿರೀಕ್ಷಕ ವಿಜಯಕುಮಾರ್ ಮುಂತಾದವರು ಇದ್ದರು.