ಮೂಡಿಗೆರೆ :ಸಂಡೇ ಲಾಕ್ ಡೌನ್ ಹಿನ್ನೆಲೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ವಾಹನಗಳಿಗೆ ತಡೆ…

253

ಕೊಟ್ಟಿಗೆಹಾರ:ಭಾನುವಾರ ಲಾಕ್‍ಡೌನ್‍ನಿಂದಾಗಿ ತುರ್ತುವಾಹನ ಹೊರತು ಪಡಿಸಿ ಇತರ ವಾಹನ ಸಂಚಾರಕ್ಕೆ ನಿಷೇಧವಿದ್ದರೂ ವಿವಿದೆಡೆಯಿಂದ ಆಗಮಿಸಿದ ಪ್ರವಾಸಿ ವಾಹನಗಳು ಕೊಟ್ಟಿಗೆಹಾರದಲ್ಲಿ ಜಮಾಯಿಸಿದ್ದವು.ಧರ್ಮಸ್ಥಳ ಹೊರನಾಡು ಶೃಂಗೇರಿ ಮುಂತಾದ ಯಾತ್ರಾ ಸ್ಥಳಗಳಿಗೆ ಕೊಟ್ಟಿಗೆಹಾರ ಮಾರ್ಗವಾಗಿ ಹೊರಟ್ಟಿದ್ದ ಪ್ರವಾಸಿಗರ ವಾಹನ ಕೊಟ್ಟಿಗೆಹಾರದಲ್ಲಿ ಕಿ.ಮಿ ಗಟ್ಟಲೇ ಸಾಲುಗಟ್ಟಿ ನಿಂತಿದ್ದವು.ಕೊಟ್ಟಿಗೆಹಾರ ಚೆಕ್‍ಪೋಸ್ಟ್‍ನಲ್ಲಿ ವಾಹನಗಳನ್ನು ಬಿಡದೇ ಇರುವುದರಿಂದ ಕೆಲ ವಾಹನಗಳು ಹಿಂದಿರುಗಿದರೆ ಮತ್ತೆ ಕೆಲ ಪ್ರವಾಸಿಗರು ಕೊಟ್ಟಿಗೆಹಾರದಲ್ಲೆ  ನಿಲ್ಲಿಸಿಕೊಂಡ ದೃಶ್ಯ ಕಂಡು ಬಂತು.ಕೊಟ್ಟಿಗೆಹಾರ ಮತ್ತು ಬಣಕಲ್‍ನಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಪೆಟ್ರೋಲ್ ಬಂಕ್, ಮೆಡಿಕಲ್, ಖಾಸಗಿ ಆಸ್ಪತ್ರೆಗಳು  ಕಾರ್ಯ ನಿರ್ವಹಿಸಿದವು.