ಮೂಡಿಗೆರೆ : ನಿರಾಶ್ರಿತರ ಮನೆಯ ತಳಪಾಯಕ್ಕೆ ನುಗ್ಗಿದ ಮಳೆನೀರು-ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಲು ನಿರಾಶ್ರಿತರ ಆಗ್ರಹ…

233
firstsuddi

ಬಣಕಲ್: ಬಿ. ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯ ಸುಣ್ನದಗೂಡಿನ ಸಮೀಪ ನೆರೆ ನಿರಾಶ್ರಿತರಿಗೆ ನೀಡಿದ ಪರ್ಯಾಯ ಜಾಗದಲ್ಲಿ ನಿರ್ಮಿಸಿದ ಮನೆಯ ತಳಪಾಯದ ತುಂಬ ನಿನ್ನೆ ಸುರಿದ ಮಳೆಯಿಂದಾಗಿ ಹೂಳು ಮತ್ತು ನೀರು ತುಂಬಿದ್ದು ಮನೆ ಕಟ್ಟಲು ತಂದು ಹಾಕಿದ್ದ ಎಂ ಸಯಾಂಡ್ ಕೊಚ್ಚಿ ಹೋಗಿದೆ.
ಅತಿವೃಷ್ಟಿ ಸಂತ್ರಸ್ತ ಮಧುಗುಂಡಿ, ಹಲಗಡಕ, ದುರ್ಗದಹಳ್ಳಿ, ಬಿದಿರುತಳ ಗ್ರಾಮದ ನೆರೆ ನಿರಾಶ್ರಿತರಿಗೆ ಸುಣ್ಣದ ಗೂಡಿನ ಸಮೀಪ ಪಯಾರ್ಯ ಜಾಗ ನೀಡಲಾಗಿದ್ದು ಈ ಗ್ರಾಮಗಳ 20 ಕ್ಕೂ ಹೆಚ್ಚು ಕುಟುಂಬಗಳು ಈ ಜಾಗದಲ್ಲಿ ತಳಪಾಯ ನಿರ್ಮಿಸಿದ್ದರು. ಮತ್ತೆ ಕೆಲವರು ತಳಪಾಯ ನಿರ್ಮಿಸಲು ಪ್ರಾರಂಭಿಸಿದ್ದರು. ಆದರೆ ನಿನ್ನೆ ಸುರಿದ ಮಳೆಗೆ ತಳಪಾಯದಲ್ಲಿ ಮಳೆನೀರು ಮತ್ತು ಹೂಳು ತುಂಬಿರುವುದು ಮನೆ ಕಟ್ಟುವ ಕನಸಿಗೆ ತಣ್ಣೀರೆಚಿದಂತಾಗಿದೆ.

ಮಳೆನೀರು ಹರಿದ ಪರಿಣಾಮ ತಳಪಾಯದ ಮಣ್ಣು ಕೊಚ್ಚಿ ಹೋಗಿದೆ. ಸಾವಿರಾರು ರೂ ನೀಡಿ ತಮದ ಎಂ ಸ್ಯಾಂಡ್ ಮಳೆನೀರಿನೊಂದಿಗೆ ಮಣ್ಣು ಪಾಲಾಗಿದ್ದು ಕಳೆದ ವರ್ಷದ ನೆರೆಯಿಮದ ಬದುಕು ಕಳೆದುಕೊಂಡು ನೆಲೆ ಕಂಡುಕೊಳ್ಳುವ ನಿರೀಕ್ಷೆಯಲ್ಲಿರುವ ನೆರೆ ನಿರಾಶ್ರಿತರಿಗೆ ಮಳೆ ಬೆನ್ನು ಬಿಡದೇ ಕಾಡತೊಡಗಿದೆ.
ಸರ್ಕಾರ ನಿರಾಶ್ರಿತ ಕುಟುಂಬಗಳಿಗೆ ಪಯಾರ್ಯ ಜಾಗ ನೀಡುವಾಗ ನೀರು ಹರಿದು ಹೋಗಲು ಕಾಲುವೆ, ಕುಡಿಯುವ ನೀರು, ರಸ್ತೆ ಮುಂತಾದ ಸೌಕರ್ಯಗಳನ್ನು ಕಲ್ಪಿಸಬೇಕು. ಆದರೆ ಇಲ್ಲಿ ಚರಂಡಿ ಅವೈಜ್ಷಾನಿಕವಾಗಿ ನಿರ್ಮಿಸಿರುವುದರಿಂದ ಮಳೆ ನೀರು ತಳಪಾಯದತ್ತ ಹರಿಯುತ್ತಿದ್ದು ಇದರಿಂದ ಮನೆ ನಿರ್ಮಾಣ ಕಾರ್ಯ ತೊಡಕಾಗಿದೆ ಎಂದು ದುರ್ಗದಹಳ್ಳಿಯ ನಿರಾಶ್ರಿತ ಸುಧಾಕರ್ ಅಳಲು ತೋಡಿಕೊಂಡಿರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ರಮೇಶ್, ಈ ವಿಷಯ ನನ್ನ ಗಮನಕ್ಕೆ ಬಮದಿದ್ದು ಕೂಡಲೇ ಸ್ಥಳಕ್ಕೆ ಇಂಜಿನಿಯರ್ ಅವರನ್ನು ಕಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.