ಮೂಡಿಗೆರೆ : ನೂತನ ಸಚಿವರ ಮುಂದೆ ಕಣ್ಣೀರು ಹಾಕಿ ತಮ್ಮ ನೋವನ್ನು ತೋಡಿಕೊಂಡ ನಿರಾಶ್ರಿತರು…

2810

ಮೂಡಿಗೆರೆ : ಭಾರಿ ಮಳೆಯಿಂದ ಹಾನಿಯಾದ ಪ್ರದೇಶವಾದ ಮಲೆಮನೆ ಗ್ರಾಮಕ್ಕೆ ನೂತನ ಸಚಿವರಾದ ಸಿ.ಟಿ. ರವಿ ಹಾಗೂ ಮಾಧುಸ್ವಾಮಿ ಅವರು ಭೇಟಿ ನೀಡಿದ್ದು, ಈ ವೇಳೆ ಮನೆ ಕಳೆದುಕೊಂಡ ಸಂತ್ರಸ್ತರು ಸಚಿವರ ಮುಂದೆ ಕಣ್ಣೀರು ಹಾಕಿ ತಮ್ಮ ನೋವನ್ನು ತೋಡಿಕೊಂಡರು. ಈ ವೇಳೆ ಸಚಿವ ಸಿ.ಟಿ. ರವಿ ಅವರು ಕೂಡಾ ಭಾವುಕರಾಗಿದ್ದು, ಬಳಿಕ ಸಚಿವ ಮಾಧುಸ್ವಾಮಿ ಅವರಿಗೆ ಮಲೆನಾಡಿನ ಚಿತ್ರಣದ ಬಗ್ಗೆ ಬಿಡಿಸಿ ಹೇಳಿದರು. ಸಚಿವ ಮಾಧುಸ್ವಾಮಿ ಅವರು ಪ್ರವಾಹದಿಂದ ಮನೆ-ಮಠ ಕಳೆದುಕೊಂಡ ಸಂತ್ರಸ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.