ಮೂಡಿಗೆರೆ : ಪತಿ ಮತ ಎಣಿಕೆಗೆ ಕರೆದ್ಯೊಯ್ದಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಪತ್ನಿ…

452
firstsuddi

ಕೊಟ್ಟಿಗೆಹಾರ : ಚುನಾವಣೆಗೆ ಸ್ಪರ್ಧಿಸಿದ ಪತಿ ಮತ ಎಣಿಕೆಗೆ ಕರೆದ್ಯೊಯ್ದಿಲ್ಲ ಎಂಬ ಕಾರಣಕ್ಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಣಕಲ್ ಠಾಣಾ ವ್ಯಾಪ್ತಿಯ ಪಟದೂರಿನಲ್ಲಿ ನಡೆದಿದೆ.
ಪಟದೂರಿನ ಸುನಿತಾ (42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈ ಬಗ್ಗೆ ಸುನಿತಾ ಅವರ ಪುತ್ರ ಅಭಿಷೇಕ್ ಬಣಕಲ್ ಠಾಣೆಯಲ್ಲಿ ದೂರು ನೀಡಿದ್ದು, ಸುನಿತಾ ಅವರ ಪತಿ ತ್ರಿಪುರ ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಗೆಲುವು ಸಾಧಿಸಿದ್ದರು. ಮತ ಎಣಿಕೆಗೆ ಪತ್ನಿ ಸುನಿತಾ ಅವರನ್ನು ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕೆ ಸುನಿತಾ ಅವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಸುನಿತಾ ಅವರು ಕಾಣೆಯಾಗಿದ್ದು, ಮನೆಯವರು ಹುಡುಕಾಟ ನಡೆಸಿದಾಗ ಇಂದು ಬೆಳಿಗ್ಗಿನ ಜಾವ ಅವರ ತೋಟದ ಕೆರೆಯಲ್ಲಿ ಸುನಿತಾ ಅವರ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಬಣಕಲ್ ಪಿಎಸ್‍ಐ ಶ್ರೀನಾಥ್ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.