ಮೂಡಿಗೆರೆ : ಬಣಕಲ್‍ನಲ್ಲಿ ನಿರ್ಗತಿಕ ವ್ಯಕ್ತಿಯ ಆರೈಕೆ…

194
firstsuddi

ಕೊಟ್ಟಿಗೆಹಾರ : ಬಣಕಲ್‍ನ ಪಟ್ಟಣದಲ್ಲಿ ಅಸ್ವಸ್ಥನಾಗಿದ್ದ ನಿರ್ಗತಿಕರೊಬ್ಬರನ್ನು ಸ್ಥಳೀಯರು ಇಂದು ಆರೈಕೆ ಮಾಡಿ ಆಸ್ಪತ್ರೆಗೆ ದಾಖಲಿಸಿದರು.

ಬಣಕಲ್‍ನ ಅಂಗಡಿಮಳಿಗೆಗಳ ಕಟ್ಟಡವೊಂದರಲ್ಲಿ ಅಸ್ವಸ್ಥವಾಗಿ ಬಿದ್ದಿದ್ದ ಮಂಗಳೂರು ಮೂಲದ ನಿರ್ಗತಿಕ ವ್ಯಕ್ತಿಗೆ ಸ್ಥಳೀಯರು ಹೊಸ ಬಟ್ಟೆ ತೊಡಿಸಿ ಉಪಹಾರ ಕೊಡಿಸಿ ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಆರೀಫ್, ಪೋಲಿಸ್ ಸಿಬ್ಬಂದಿ ಜಗದೀಶ್, ಕಟ್ಟಡದ ಮಾಲೀಕ ಶರೀಫ್, ಸ್ಥಳೀಯರಾದ ದಿಲೀಪ್, ನಫೀಸ್, ಹರೀಶ್ ಮುಂತಾದವರು ಇದ್ದರು.