ಮೂಡಿಗೆರೆ : ಬದಲಾವಣೆ ಹಾಗೂ ಕರ್ತವ್ಯ ತಂಡದ ವತಿಯಿಂದ ಬಣಕಲ್-ದೇವರಮನೆ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ…

289
firstsuddi

ಕೊಟ್ಟಿಗೆಹಾರ : ಬಣಕಲ್‍ನಿಂದ ದೇವರಮನೆ ಸಾಗುವ ರಸ್ತೆ ಇಬ್ಬದಿಯಲ್ಲಿ ಬದಲಾವಣೆ ಹಾಗೂ ಕರ್ತವ್ಯ ತಂಡದ ವತಿಯಿಂದ ಸ್ವಚ್ಛತಾ ಅಭಿಯಾನ ಹಾಗೂ ಜನಜಾಗೃತಿ ಕಾರ್ಯಕ್ರಮ ಇಂದು ನಡೆಯಿತು.

ಕರ್ತವ್ಯ ಹಾಗೂ ಬದಲಾವಣೆ ತಂಡದ ಸದಸ್ಯರಾದ ಬಿ.ಕೆ ಪೃಥ್ವಿ ಅವರು ಮಾತನಾಡಿ ದೇವರಮನೆಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು ರಾಜ್ಯದ ವಿವಿದೆಡೆಯಿಂದ ಆಗಮಿಸುತ್ತಾರೆ. ವಿಪಯಾರ್ಸ ಎಂದರೆ ದೇವರಮನೆಗೆ ಹೋಗುವ ರಸ್ತೆ ಇಬ್ಬದಿಯಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಸವಿಯುವ ಜೊತೆಗೆ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೇ ಸ್ವಚ್ಚತೆ ಕಾಪಾಡಬೇಕು ಎಂದರು.
ಪ್ರೆಶ್ ಬೀನ್ ಕೆಫೆ ಮಾಲೀಕರಾದ ಸಂದೇಶ್ ಅವರು ಮಾತನಾಡಿ ದೇವರಮನೆಗೆ ಸಾಗುವ ರಸ್ತೆಯಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ಕಸವನ್ನು ಎಸೆಯುವುದರಿಂದ ರಸ್ತೆ ಇಬ್ಬದಿಯಲ್ಲಿ ಅಲ್ಲಲ್ಲಿ ಕಸದ ತೊಟ್ಟಿಯನ್ನು ಇಡಲಾಗಿದೆ. ಪ್ರವಾಸಿಗರು ಕೂಡ ಎಲ್ಲೆಂದರಲ್ಲಿ ಕಸವನ್ನು ಎಸೆಯದೆ ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕರ್ತವ್ಯ ಹಾಗೂ ಬದಲಾವಣೆ ತಂಡದ ಸದಸ್ಯರಾದ ಪ್ರವೀಣ್, ದೀಪಕ್, ಮಾನ್ಯ, ಸೌರವ್, ಸುಶ್ಮಿತಾ, ಸನ್ಮತಿ, ನಿಧಿ, ಚಂದನ್, ಪರ್ವೇಸ್, ಶರತ್, ದಿವಪ್ರಸಾದ್, ಕೌಶಿಕ್ ಮುಂತಾದವರು ಇದ್ದರು.