ಮೂಡಿಗೆರೆ : ಬುಡಕಟ್ಟು ಆದಿವಾಸಿಗಳಿಗೆ ಭೂಹಕ್ಕು ನೀಡುವಂತೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯಿಂದ ತಹಶೀಲ್ದಾರ್ ಗೆ ಮನವಿ…

277
firstsuddi

ಬಣಕಲ್: ಬಗರ್‍ಹುಕುಂ ಸಾಗವಳಿದಾರರು ಹಾಗೂ ಬುಡಕಟ್ಟು ಆದಿವಾಸಿಗಳಿಗೆ ತ್ವರಿತವಾಗಿ ಭೂಹಕ್ಕು ನೀಡುವಂತೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ವತಿಯಿಂದ ಮೂಡಿಗೆರೆ ತಹಶೀಲ್ದಾರ್ ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಮೂಡಿಗೆರೆ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಸಂಚಾಲಕರಾದ ನವೀನ್‍ಕುಮಾರ್ ಮಾತನಾಡಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರು ತಾವು ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕುಪತ್ರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿ ದಶಕಗಳೆ ಕಳೆದರೂ ಬಹುತೇಕರಿಗೆ ತಮ್ಮ ಬಗರ್ ಹುಕುಂ ಜಮೀನುಗಳ ಹಕ್ಕುಪತ್ರ ಸಿಕ್ಕಿರುವುದಿಲ್ಲ. ಭೂಮಿಯ ಮೇಲಿನ ಹಕ್ಕು ಈ ವರ್ಗದ ಜನರ ಸಂವಿಧಾನಾತ್ಮಕ ಹಕ್ಕಾಗಿದೆ. ಆದರಿಂದ ಹಕ್ಕುಪತ್ರ ನೀಡಲು ಸರ್ಕಾರ ಮುಂದಾಗಬೇಕು ಎಂದರು.
ಬುಡಕಟ್ಟು ಆದಿವಾಸಿಗಳು ಹಾಗೂ ಇತರೆ ಅರಣ್ಯವಾಸಿಗಳು ಅರಣ್ಯದಲ್ಲಿ ಹುಟ್ಟಿ ಬೆಳೆದು ತಲತಲಾಂತರಗಳಿಂದ ಅರಣ್ಯದಲ್ಲಿಯೆ ನೆಲೆಸಿರುತ್ತಾರೆ. ಅರಣ್ಯ ಪರಿಸರಕ್ಕೆ ಹೊಂದಿಕೊಂಡು ಪೂರಕ ಬದುಕು ಸಾಗಿಸುತ್ತಿದ್ದಾರೆ. ಇಂತಹವರಿಗೆ 2006 ರ ಕಾಯ್ದೆ ಅನ್ವಯ ಅನುಸೂಚಿತ ಬುಡಕಟ್ಟು ಆದಿವಾಸಿಗಳು ಹಾಗೂ ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮದ ಮೂಲಕ ವೈಯಕ್ತಿಕ ಹಾಗೂ ಸಮುದಾಯ ಅರಣ್ಯ ಭೂಮಿ ಹಕ್ಕನ್ನು ನೀಡಲು ಮುಂದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಮೇಶ್, ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಮೂಡಿಗೆರೆ ಕ್ಷೇತ್ರ ಸಂಚಾಲಕ ಪೂವಪ್ಪ, ತಾಲ್ಲೂಕು ಅಧ್ಯಕ್ಷ ಗೋಪಾಲ್ ಎಚ್.ಎಸ್. ಸದಸ್ಯರಾದ ಮಂಜಯ್ಯ ಮುಂತಾದವರು ಇದ್ದರು.