ಮೂಡಿಗೆರೆ : ಮಾನ್ಯ ಜಿಲ್ಲಾಧಿಕಾರಿಗಳು ತಮ್ಮ ಕಛೇರಿಯಲ್ಲಿ ಸಹಾಯವಾಣಿ ಕೇಂದ್ರ ಮಾಡಿ ಅದರ ನಂಬರ್‍ಗಳನ್ನು ಜಿಲ್ಲೆಯ ಎಲ್ಲಾ ಜನರಿಗೆ ತಿಳಿಯುವಂತೆ ಪ್ರಕಟಿಸಬೇಕು ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಅವರು ಒತ್ತಾಯಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಟಿವಿ ಅಥವಾ ಮುದ್ರಣ ಮಾದ್ಯಮಕ್ಕೆ ಕರೆ ಮಾಡಿದರೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎನ್ನುವ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡಿದೆ. ಸಾರ್ವಜನಿಕರ ಸಮಸ್ಯೆಗೆ ಅಥವಾ ದೂರುಗಳಿಗೆ ಸ್ಪಂದಿಸಬೇಕಾದ್ದು ಜಿಲ್ಲಾಡಳಿತದ ಆದ್ಯ ಕರ್ತವ್ಯ. ಆದರೆ ಬಹುತೇಕ ಮಂದಿಗೆ ತಮ್ಮ ಸಮಸ್ಯೆಗೆ ಸ್ಪಂದಿಸಲು ತಾಲ್ಲೂಕು ಅಥವಾ ಜಿಲ್ಲಾಡಳಿತ ಎಂಬ ಇಲಾಖೆಗಳಿವೆ ಎನ್ನುವ ಸಾಮಾನ್ಯ ಅರಿವು ಕೂಡ ಇಲ್ಲವಾಗಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅವರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದನೆ ನೀಡಬೇಕಾದ್ದು ಅಧಿಕಾರಿಗಳ ಆದ್ಯ ಕರ್ತವ್ಯ.
ಕರ್ನಾಟಕ ರಾಜ್ಯದಲ್ಲಿ ಅನೇಕ ಉತ್ಸಾಹಿ ಜಿಲ್ಲಾಧಿಕಾರಿಗಳು ಇದ್ದಾರೆ. ಸಾಮಾನ್ಯ ಸಂಗತಿಗಳಿಗಿಂತ ವಿಭಿನ್ನವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಸಾರ್ವಜನಿಕರ ಸೇವೆ ಸಲ್ಲಿಸುವ ಅಭೂತಪೂರ್ವ ಅವಕಾಶ ಇದೆ. ಮಂದುವರೆದ ದೇಶಗಳಲ್ಲಿ ಇರುವಂತೆ ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ 24*7 ಸೇವೆ ಲಭ್ಯವುಳ್ಳ ಸಹಾಯವಾಣಿ ಸೇವೆಯನ್ನು ಪ್ರಾಂಭ ಮಾಡುವುದು ಎಲ್ಲರ ದೃಷ್ಟಿಯಿಂದ ಉತ್ತಮ ಕಾರ್ಯವಾಗಬಲ್ಲುದು. ಮಾದ್ಯಮಗಳ ಮೇಲಿನ ಅವಲಂಬನೆ ಹಾಗು ನಂಬಿಕೆ ಬದಲಾಗಿ ಅಧಿಕಾರಿಗಳ ಮೇಲಿನ ಅಭಿಮಾನ ಹೆಚ್ಚುವುದರಲ್ಲಿ ಇದು ಸಹಕಾರಿ ಎಂದು ತಮ್ಮ ಪತ್ರಕಾ ಹೇಳಿಕೆಯಲ್ಲಿ ಸಲಹೆ ನೀಡಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಮಾನ್ಯ ಜಿಲ್ಲಾಧಿಕಾರಿಗಳು ತಮ್ಮ ಕಛೇರಿಯಲ್ಲಿ ಸಹಾಯವಾಣಿ ಕೇಂದ್ರ ಮಾಡಿ ಜಿಲ್ಲೆಯ ಎಲ್ಲಾ ಜನರಿಗೆ...










