ಮೂಡಿಗೆರೆ : ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆ ಹೊರಟ ಶ್ವಾನ…

512
firstsuddi

ಮೂಡಿಗೆರೆ : ತಿರುಪತಿಯಿಂದ ಪಾದಯಾತ್ರೆ ಹೊರಟ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ತೋಡೂರು ಗ್ರಾಮದ ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶ್ವಾನವೊಂದು ಅವರ ಜೊತೆಯಲ್ಲೇ ತಿರುಪತಿಯಿಂದ ಹಿಂಬಾಲಿಸಿ ಸುಮಾರು 600 ಕಿಲೋ ಮೀಟರ್ ನಡೆದು ಬಂದಿದ್ದು, ಮಂಗಳೂರಿನಿಂದ ಅ.27ರಂದು ರೈಲು ಮೂಲಕ ತಿರುಪತಿ ತೆರಳಿದ ಮಾಲಾಧಾರಿಗಳು ಅ.31ರಂದು ತಿರುಪತಿಯಿಂದ ಪಾದಯಾತ್ರೆ ಆರಂಭಿಸಿದ್ದು, ಅವರ ಜೊತೆಯಲ್ಲೇ ಶ್ವಾನವು 16 ದಿನಗಳ ಕಾಲ ಮಾಲಾಧಾರಿಗಳೊಂದಿಗೆ ನಡೆದು ಬಂದಿದ್ದು, ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಗುರುಸ್ವಾಮಿ ಅವರು, ತಿರುಪತಿಯಿಂದ 2-3 ಕಿಲೋ ಮೀಟರ್ ಮುಂದೆ ಸಾಗುವಾಗ ಈ ಶ್ವಾನ ನಮ್ಮನ್ನು ಹಿಂಬಾಲಿಸಿತು. ಇದನ್ನು ಗಮನಿಸಿದ ನಮ್ಮ ಸ್ವಾಮಿ ಒಬ್ಬರು ಬಿಸ್ಕೆಟ್ ಹಾಕಿದ್ದರು. ಅಲ್ಲಿಂದ ನಮ್ಮ ಜೊತೆಯಲ್ಲೇ ಇಂದು ಮೂಡಿಗೆರೆ ತಲುಪಿದೆ. 16ದಿನದಿಂದ ನಮ್ಮ ಜೊತೆಯಲ್ಲೇ ನಡೆದುಕೊಂಡು ಬರುತ್ತಿದೆ ಎಂದರು.