ಮೂಡಿಗೆರೆ :ತಾಲ್ಲೂಕಿನ ಹಿಂದುಳಿದ ಹಸಲರು ಸಂಘದ ಸ್ವಜಾತಿ ವಿದ್ಯಾರ್ಥಿಗಳಿಗೆ ವಿದ್ಯಾಚೇತನ 2019 ರ ಕಾರ್ಯಕ್ರಮದ ಅಡಿಯಲ್ಲಿ ಪ್ರತಿಭಾ ಪುರಸ್ಕಾರ ಮತ್ತುಜನಾಂಗದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮೂಡಿಗೆರೆ ಲ್ಯಾಂಪ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಬೆಂಗಳೂರಿನ ಮೊಗೇರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ತಾಲ್ಲೂಕು ಗಿರಿಜನ ಹಸಲರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ವಿಶ್ವನಾಥ್ ಅವರು, ಬೇರೆ ಬೇರೆ ತಾಲ್ಲೂಕಿನಲ್ಲಿ ವಿವಿಧ ಸಂಘಗಳ ಜೊತೆಗೂಡಿ ಮೊಗೇರ ಕ್ಷೇಮಾಭಿವೃದ್ಧಿ ಸಂಘವು ಸಮಾಜಮುಖಿ ಕೆಲಸವನ್ನು ಮಾಡುತ್ತಿದೆ. ನಮ್ಮ ವರ್ಗಗಳು ಮೂಲತಃ ಆರ್ಥಿಕವಾಗಿ ತೀರಾ ಹಿಂದುಳಿದಿವೆ. ಆರ್ಥಿಕ ಸಹಾಯದ ಜೊತೆಗೆ ಉತ್ತಮ ಮಾರ್ಗದರ್ಶನದ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಉದ್ದೇಶ ಹೊಂದಲಾಗಿದೆ. ಇಂದಿಗೂ ಕೂಡ ನಮ್ಮಲ್ಲಿ ಹಲವರಿಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ನಂತರ ಏನು ಮಾಡಬೇಕು ಎಂಬುವುದರ ಅರಿವಿಲ್ಲ. ಇದರ ಜೊತೆಗೆ ಸರಕಾರದಿಂದ ನೀಡಲಾಗುತ್ತಿರುವ ಹಲವು ಸೌಲಭ್ಯಗಳ ಬಳಕೆ ಮಾಡುವ ಅರಿವು ಕೂಡ ಇಲ್ಲ. ಇಂಥಹ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ. ಇದರ ಜೊತೆಗೆ ಹಲವು ದುಶ್ಚಟಗಳಿಗೆ ನಮ್ಮ ಯುವಕರು ಬಲಿಯಾಗುತ್ತಿದ್ದು ಇಂಥಹ ಗಂಭೀರವಾದ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೊಗೇರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಎಸ್. ರಾಜಶೇಕರ್ ಮಟ್ಟಿ ಅವರು, ವಿದ್ಯೆಗೆ ಅಪಾರವಾದ ಬೆಲೆ ಇದೆ. ನಮ್ಮ ಯುವ ಪೀಳಿಗೆ ಸಣ್ಣ ಆದಾಯಗಳಿಗೆ ಜೋತು ಬಿದ್ದು ಓದಿನ ಕಡೆ ಗಮನ ನೀಡುತ್ತಿಲ್ಲ ಹಾಗೂ ಚಿಕ್ಕ ವಯಸ್ಸಿನಲ್ಲಿ ಹಲವು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಇದರ ಬಗ್ಗೆ ಎಲ್ಲರೂ ಹೋರಾಟ ಮಾಡಬೇಕು. ಓದಿನಲ್ಲಿ ಮುಂದಿರುವ ಮಕ್ಕಳಿಗೆ ಉನ್ನತ ವ್ಯಾಸಂಗದ ಜೊತೆಗೆ ಓದಿಗೆ ಪೂರಕ ವಾತಾವರಣ ಕೆಲಸ ಮಾಡುವ ಕೆಲಸ ಮಾಡಲಾಗುತ್ತಿದೆ. ಸರಕಾರದ ಯೋಜನೆಗಳ ಜೊತೆಗೆ ಸಂಘ ಸಂಸ್ಥೆಗಳಿಂದ ಸಿಗುವ ಸಹಕಾರವನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೆ ತಲುಪುವ ಯೋಜನೆ ರೂಪಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಕೆ.ಮಾಣಿ ಕಮ್ಮರಗೋಡು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಂ.ದೇಜಪ್ಪ ಹೊಯ್ಸಳಲು, ಡಾ.ಕವಿರಾಜ್ ಬನ್ನೂರು, ಶೇಖರ್ ಕೆ ಕೊಟ್ಟಿಗೆಹಾರ, ಉಮೇಶ್ ಕೊಯ್ಯೂರು, ಹೆಚ್.ಕೆಕೃಷ್ಣಪ್ಪ, ನಿಡಗೋಡು ಹರೀಶ್, ಕುನ್ನಳ್ಳಿ ಕೃಷ್ಣ, ನಿಡಗೋಡು ಪ್ರಕಾಶ್, ಹಾಂದಿ ಹೊಸಪೇಟೆಯ ಬಿ.ಎನ್.ರಾಜು, ಕಳಸದ ಜಿ.ಕೃಷ್ಣಪ್ಪ, ಬೂತನಕಾಡುರವಿ, ಕೂಳೂರು ನಾರಾಯಣ್, ಕರಿಯಪ್ಪ, ಶಿವಪ್ಪ ಆಗಮಿಸಿದ್ದರು. ಓದಿನಲ್ಲಿ ಉತ್ತಮ ಸಾಧನೆ ಮಾಡಿದ ಹಸಲರು ಸಂಘದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ಸಂಘದ ಸಾಧಕರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಹೆಚ್.ಜಿ.ಸುಮತಿಅವರು ಪ್ರಾರ್ಥನೆ ಮಾಡಿದರು. ಸ್ವಾಗತ ಭಾಷಣವನ್ನುಜಯ, ವಂದನಾರ್ಪಣೆಯನ್ನು ಶಿವಕುಮಾರ್ ಅವರು ಮಾಡಿದರು. ಹಸಲರು ಸಂಘದ ಕಾರ್ಯದರ್ಶಿ ಹರೀಶ್, ಉಪಾಧ್ಯಕ್ಷರಾದ ನಾರಾಯಣ, ಚಂದ್ರಕಲಾ, ಖಜಾಂಜಿ ಸೀನ, ಸದಸ್ಯರುಗಳಾದ ಕೆ.ಟಿ.ಪೂವಪ್ಪ, ಗಣೇಶ್, ತಮ್ಮಣ್ಣ, ಪೂರ್ಣೇಶ್, ರತೀಶ್, ರವಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.










