ಮೂಡಿಗೆರೆ : ರಸ್ತೆ ದಾಟುವ ವೇಳೆ ವಾಹನಕ್ಕೆ ಸಿಲುಕಿ ಹುಲಿಬೆಕ್ಕು ಸಾವು…

115
firstsuddi

ಕೊಟ್ಟಿಗೆಹಾರ : ವಾಹನ ಡಿಕ್ಕಿಯಾಗಿ ಅಪರೂಪದ ಹುಲಿ ಬೆಕ್ಕೊಂದು ಮೃತಪಟ್ಟ ಘಟನೆ ಕೊಟ್ಟಿಗೆಹಾರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಇಂದು ಬೆಳಿಗ್ಗೆ ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ ಸಮೀಪ ಅಪರೂಪದ ಹುಲಿ ಬೆಕ್ಕೊಂದು ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದು ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಬಸವರಾಜು, ಕಿರಣ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಚಿರತೆ ಬೆಕ್ಕಿನ ಕಳೇಬರವನ್ನು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನಡೆಸಲಾಯಿತು.