ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಕಾಮಗಾರಿ ಆರಂಭ…

295
Firstsuddi

ಕೊಟ್ಟಿಗೆಹಾರ: ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಕೊಟ್ಟಿಗೆಹಾರದವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಕೊಟ್ಟಿಗೆಹಾರದಲ್ಲಿ ರಸ್ತೆ ಬದಿ ಒಳಚರಂಡಿ ನಿರ್ಮಿಸುವ ಕಾಮಗಾರಿ ಪ್ರಾರಂಭವಾಗಿದೆ.
ರಸ್ತೆ ಬದಿ ಕಂದಕ ನಿರ್ಮಿಸಿರುವುದರಿಂದ ವರ್ತಕರಿಗೆ ತೊಂದರೆಯಾಗಿದ್ದು ಇನ್ನು ಹಲವು ಕಟ್ಟಡಗಳು ರಸ್ತೆಯ ಸಮೀಪವೇ ಇರುವುದರಿಂದ ತೆರವುಗೊಳಿಸಲು ಸೂಚಿಸಲಾಗಿದೆ. ಕೆಲವು ಅಂಗಡಿ ಮಾಲೀಕರು ರಸ್ತೆಗೆ ಬಾಗಿದ ಮೇಲ್ಚಾವಣೆಯ ಶೀಟುಗಳನ್ನು ತೆಗೆದು ಕಾಮಗಾರಿಗೆ ಅವಕಾಶ ಮಾಡಿದ್ದಾರೆ. ಹೆದ್ದಾರಿ ಸಿಬ್ಬಂದಿ ಕೂಡ ಕಟ್ಟಡಗಳಿಗೆ ಹೆಚ್ಚಿನ ಹಾನಿಯಾಗದಂತೆ ಜಾಗರೂಕತೆ ವಹಿಸಿದ್ದಾರೆ.