ಮೂಡಿಗೆರೆ : ವಿಮಾನೌಕರರ ಸಂಘದ ವತಿಯಿಂದ ನೆರೆ ಸಂತ್ರಸ್ತರಿಗೆ ನೆರವು…

316
firstsuddi

ಬಣಕಲ್: ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಉಂಟಾದ ನೆರೆಪ್ರವಾಹದಿಂದಾಗಿ ಹಲವರು ಬದುಕು ಕಳೆದುಕೊಂಡಿದ್ದು ನೆರೆ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ನೆರವಾಗುವ ಅಗತ್ಯವಿದೆ ಎಂದು ಉಡುಪಿ ವಿಮಾ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ್ ಹೇಳಿದರು.
ಸುಂಕಸಾಲೆ ಗ್ರಾ.ಪಂ ಆವರಣದಲ್ಲಿ ಅಖಿಲ ಭಾರತ ವಿಮಾ ನೌಕರರ ಸಂಘ ಹಾಗೂ ಉಡುಪಿ ವಿಮಾ ನೌಕರರ ಸಂಘದ ವತಿಯಿಂದ ನಡೆದ ನೆರೆ ಸಂತ್ರಸ್ತರಿಗೆ ಅಗತ್ಯ ಸಾಮಾಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿಯ ವಿಮಾ ನೌಕರರ ದೇಣಿಗೆ ಸಂಗ್ರಹಿಸಿ ನೆರೆ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಡಲು ನಿರ್ದರಿಸಿದ್ದು ಅದರಂತೆ ಮೂಡಿಗೆರೆ ತಾಲ್ಲೂಕಿನ ಜಾವಳಿ, ಮಲೆಮನೆ, ದುರ್ಗದಹಳ್ಳಿ, ಮದುಗುಂಡಿ, ಬಿಳಗಲಿ ಮುಂತಾದ ನೆರೆಪೀಡಿತ ಪ್ರದೇಶಗಳ ನಿರಾಶ್ರಿತರಿಗೆ ಈ ದಿನ ವಿಮಾನೌಕರರ ಸಂಘದಿಂದ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಎಂದರು.
ಉಡುಪಿ ವಿಮಾ ನೌಕರರ ಸಂಘದ ಉಪಾಧ್ಯಕ್ಷ ಸುಧಾಕರ್ ಮಾತನಾಡಿ ನಮ್ಮ ಮನೆಯ ಸದಸ್ಯರಿಗೆ ನೆರವು ನೀಡುತ್ತಿದ್ದೇವೆ ಎಂಬ ಮನಸ್ಥಿತಿಯಿಂದ ಇಂದು ಅಗತ್ಯ ಸಾಮಾಗ್ರಿಗಳನ್ನು ವಿತರಿಸುತ್ತಿದ್ದು. ನೆರೆ ಸಂತ್ರಸ್ತರು ಶೀಘ್ರವಾಗಿ ಬದುಕು ಕಟ್ಟಿಕೊಳ್ಳಲಿ. ಸುಸ್ಥಿತಿಯಲ್ಲಿರುವವರು ಅಸಹಾಯಕರಿಗೆ ನೆರವಾಗುವುದು ನಿಜವಾದ ಮಾನವೀಯತೆ. ಅ ನಿಟ್ಟಿನಲ್ಲಿ ಎಲ್ಲರೂ ಕರ್ಯ ಪ್ರವೃತ್ತರಾಗೋಣ ಎಂದರು.
ಸುಂಕಸಾಲೆ ಗ್ರಾ.ಪಂ ಅಧ್ಯಕ್ಷ ಪ್ರೇಮ್ ದಿವಾಕರ್, ಪಿಡಿಓ ಪದ್ಮರಾಜ್, ವಿಮಾ ನೌಕರರ ಸಂಘದ ಪಧಾಧಿಕಾರಿಗಳಾದ ಹರೀಶ್, ಸಂತೋಷ್, ಸುರೇಶ್, ಮುಂತಾದವರು ಇದ್ದರು.