ಮೂಡಿಗೆರೆ : ವೀಕೆಂಡ್ ಕರ್ಪ್ಯೂಗೆ ಬಣಕಲ್ ಹಾಗೂ ಕೊಟ್ಟಿಗೆಹಾರ ಸಂಪೂರ್ಣ ಸ್ತಬ್ದ..!

208
firstsuddi

ಕೊಟ್ಟಿಗೆಹಾರ : ವೀಕೆಂಡ್ ಕರ್ಪ್ಯೂನ ಮೊದಲನೇ ದಿನವಾದ ಇಂದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಆಗಿದ್ದು ರಸ್ತೆಗಳು ಬಣಗುಡುತ್ತಿದ್ದವು.

ಮೆಡಿಕಲ್, ಪೆಟ್ರೋಲ್ ಬಂಕ್, ಖಾಸಗಿ, ಸರ್ಕಾರಿ ಆಸ್ಪತ್ರೆಗಳು ಹೊರತು ಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.

ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳ ಸಂಚಾರ ಇದ್ದರೂ ಕೂಡ ಪ್ರಯಾಣಿಕರಿಲ್ಲದೇ ಬಸ್ಸುಗಳು ಖಾಲಿ ಸಂಚರಿಸುತ್ತಿರುವುದು ಕಂಡು ಬಂತು.
ಬಣಕಲ್ ಕೊಟ್ಟಿಗೆಹಾರದಲ್ಲಿ ಪೋಲಿಸ್ ಗಸ್ತು ವಾಹನ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂತು. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ಪೋಲಿಸರು ತರಾಟೆಗೆ ತೆಗೆದುಕೊಂಡವು. ಇಂದು ಬೆಳಿಗ್ಗೆ 10 ಗಂಟೆಯವರೆಗೂ ಹಾಲು, ದಿನಪತ್ರಿಕೆ, ದಿನಸಿ ವಸ್ತುಗಳ ಅಂಗಡಿ ತೆರೆದಿದ್ದವು.

ಕೊಟ್ಟಿಗೆಹಾರ ಸರ್ಕಾರಿ ಬಸ್ ನಿಲ್ದಾಣದಲ್ಲಿ ಹಳ್ಳಿಯೊಂದಕ್ಕೆ ಹೋಗಬೇಕಾದ ಕುಟುಂಬವೊಂದು ವೀಕೆಂಡ್ ಕಪ್ರ್ಯೂವಿನ ಅರಿವಿಲ್ಲದೇ ಬಂದು ಹಳ್ಳಿಗೆ ಹೋಗಲು ಸಾದ್ಯವಾಗದೇ ಪರದಾಡುವಂತಾಯಿತು.