ಮೂಡಿಗೆರೆ : ವೈದ್ಯರಿಗೆ ಕೊರೊನಾ ಪಾಸಿಟಿವ್-ಸಂಪರ್ಕದಲ್ಲಿದ್ದ 92 ಮಂದಿಗೆ ಕೊಟ್ಟಿಗೆಹಾರ ಏಕಲವ್ಯ ಶಾಲೆಯಲ್ಲಿ ಕ್ವಾರಂಟೈನ್…

521
firstsuddi

ಕೊಟ್ಟಿಗೆಹಾರ :ಕೊರೊನಾ ಸೋಂಕಿಗೊಳಗಾದ ಮೂಡಿಗೆರೆ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಪ್ರಥಮ ಹಂತದಲ್ಲಿ ಸಂಪರ್ಕದಲ್ಲಿದ್ದ 92 ಮಂದಿಯನ್ನು ಕ್ವಾರಂಟೈನ್‍ನಲ್ಲಿಡಲು ತರುವೆ ಗ್ರಾ.ಪಂ ವ್ಯಾಪ್ತಿಯ ತರುವೆಯ ಏಕಲವ್ಯ ವಸತಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಇಂದು ಸಂಜೆಯವರೆಗೆ ನಂದಿಪುರ ಗ್ರಾಮದ ವೈದ್ಯರೊಂದಿಗೆ ಪ್ರಥಮ ಹಂತದಲ್ಲಿ ಸಂಪರ್ಕದಲ್ಲಿದ್ದ 92 ಮಂದಿಯನ್ನು ತರುವೆ ಏಕಲವ್ಯ ವಸತಿ ಶಾಲೆಗೆ ಕರೆತರಲಾಗಿದೆ. ವೈದ್ಯಕೀಯ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿ ಮೊಕಂ ಹೂಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಾಲ್ಲೂಕು ಕಾರ್ಯ ನಿರ್ವಾಹಣಾಧಿಕಾರಿ ವೆಂಕಟೇಶ್, ವೈದ್ಯರೊಂದಿಗೆ ಪ್ರಥಮ ಹಂತದಲ್ಲಿ ಸಂಪರ್ಕದಲ್ಲಿದ್ದ ಬಸ್ಕಲ್ ಗ್ರಾಮಸ್ಥರನ್ನು ಬಿಳಗುಳಕ್ಕೆ, ಮಾಕೋನಹಳ್ಳಿ ಗ್ರಾಮಸ್ಥರನ್ನು ಗೋಣೀಬೀಡಿಗೆ ಹಾಗೂ ನಂದಿಪುರ ಗ್ರಾಮಸ್ಥರನ್ನು ತರುವೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಒಟ್ಟು 874 ಮಂದಿಯನ್ನು ಕ್ವಾರಂಟೈನ್ ಮಾಡಬೇಕಾಗಿದ್ದು ಸ್ಥಳಾವಕಾಶ ಸಾಲದಿದ್ದರೇ ಬಣಕಲ್‍ನ ಬಿಸಿಎಂ ವಸತಿ ನಿಲಯದಲ್ಲೂ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.